ಯಾವುದೇ ಕಾರಣಕ್ಕೂ ಹೊಸ ಜಾತಿಗಳ ಸೇರ್ಪಡೆ ಒಪ್ಪುವುದಿಲ್ಲ- ಸಂಸದ ಯದುವೀರ್

ಮೈಸೂರು,ಸೆಪ್ಟಂಬರ್,17,2025 (www.justkannada.in):  ಎಸ್ ಟಿ ಪಟ್ಟಿಗೆ ಕುರುಬ ಸಮುದಾಯವನ್ನ ಸೇರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಂಸದ ಯದುವೀರ್, ಸರ್ಕಾರ ಯಾಕೆ ಈ ರೀತಿ ನಿಲುವು ತೆಗೆದುಕೊಳ್ಳೂತ್ತಿದೆ ಗೊತ್ತಿಲ್ಲ. ಸಂವಿಧಾನದ ಆಶಯದಂತೆ ನಾವು ನಡೆಯಬೇಕು ಎಂದರು.

ಕ್ರಿಶ್ಚಿಯನ್ ಕಾಲಂನಲ್ಲಿ ಹಿಂದೂ ಉಪಜಾತಿಗಳ ಹೆಸರು ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್,  ಇದು ಸರಿಯಲ್ಲ ಹಿಂದೆ ಈ ರೀತಿ ಜಾತಿ ಹೆಸರು ಇಲ್ಲ ಯಾರನ್ನೋ ಮೆಚ್ಚಿಸುವ ಸಲುವಾಗಿ ಹೊಸ ಜಾತಿ ಸೃಷ್ಠಿ ಆಗುತ್ತಿದೆ  ಈಗಾಗಲೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.  ಯಾವುದೇ ಕಾರಣಕ್ಕೂ ಹೊಸ ಜಾತಿಗಳ ಸೇರ್ಪಡೆ ಒಪ್ಪುವುದಿಲ್ಲ ಎಂದರು.

Key words: inclusion, new castes, Government, MP, Yaduveer