NDPS ಕಾಯ್ದೆಯಡಿ ವಶಪಡಿಸಿಕೊಂಡಿದ್ದ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಾಶ

ಮೈಸೂರು,ಸೆಪ್ಟಂಬರ್,16,2025 (www.justkannada.in): ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿದ್ದ 13 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ಇಂದು ನಾಶಪಡಿಸಲಾಯಿತು.

ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮ್ಮುಖದಲ್ಲಿ  ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಗುಜ್ಜೆಗೌಡನಪುರದಲ್ಲಿ ದಹನಕಾರಕ ಪ್ಲಾಂಟ್ ನಲ್ಲಿ ಪರಿಸರ ಅಧಿಕಾರಿ ಹಾಗೂ ಪಂಚಾಯ್ತಿದಾರರ ಸಮಕ್ಷಮದಲಲಿ ಪರಿಸರ ಮಾಲಿನ್ಯವಾಗದಂತೆ ನಾಶಪಡಿಸಲಾಯಿತು.

ಮೈಸೂರು ನಗರದ ಎನ್.ಡಿ.ಪಿ.ಎಸ್. ಕಾಯ್ದೆಯ 23 ಪ್ರಕರಣಗಳಲ್ಲಿ ಒಟ್ಟು 43 ಕೆ.ಜಿ 308 ಗ್ರಾಂ ಗಾಂಜಾ. 01 ಪ್ರಕರಣದಲ್ಲಿ 3 ಗ್ರಾಂ 75 ಮಿ.ಗ್ರಾಂ Methamphetamine ಮಾದಕ ಪದಾರ್ಥಗಳನ್ನು ನಾಶಪಡಿಸಲಾಗಿದೆ. ಇವುಗಳ ಅಂದಾಜು ಮೌಲ್ಯ 13,15,000 ರೂ. ಆಗಿದೆ.

ಈ ವೇಳೆ ಮೈಸೂರು ನಗರ ಡ್ರಗ್ ಡಿಸ್ಪೋಸಲ್ ಕಮಿಟಿಯ ಛೇರ್‌ ಮನ್‌   ಕೆ.ಎಸ್ ಸುಂದರ್ ರಾಜ್, ಡಿ.ಸಿ.ಪಿ. ಕೇಂದ್ರಸ್ಥಾನ. ಅಪರಾಧ ಮತ್ತು ಸಂಚಾರ ಹಾಗೂ ಕಮಿಟಿಯ ಸದಸ್ಯ ಕಾರ್ಯದರ್ಶಿ ಮಹಮ್ಮದ್ ಶರೀಫ್ ರಾವುತರ್. ಎ.ಸಿ.ಪಿ. ನಗರ ಅಪರಾಧ ವಿಭಾಗ ಹಾಗೂ ಸದಸ್ಯ  ಮುಸ್ತಾಕ್ ಪಾಷ, ಪೊಲೀಸ್ ಇನ್ಸ್‌ ಪೆಕ್ಟರ್, ಸಿ.ಸಿ.ಆರ್.ಬಿ. ಘಟಕ, ಮೈಸೂರು ನಗರ ಹಾಗೂ ಇತರೇ ಪೋಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: Drugs, worth Rs 13 lakh, seized , NDPS Act, destroyed, Mysore