ಬೆಂಗಳೂರು,ಸೆಪ್ಟಂಬರ್,15,2025 (www.justkannada.in): ಎಸ್ ಟಿ ಪಟ್ಟಿಗೆ ಕುರುಬ ಸಮುದಾಯವನ್ನ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಕುರುಬ ಸಮುದಾಯದ ಸಭೆ ಕರೆದಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕುರುಬ ಸಮುದಾಯವನ್ನ ಎಸ್ ಟಿ ಪಟ್ಟಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಈ ಬಗ್ಗೆ ನಾವು ದಾಖಲೆ ಕೇಳಿದ್ದವು. ನಾಳೆ ಬೆಂಗಳೂರಿನಲ್ಲಿ ಕುರುಬ ಸಮುದಾಯದ ಸಭೆ ಕರೆದಿದ್ದಾರೆ. ಅದಾದ ಬಳಿ ಕೋಲಿ ಸಮುದಾಯದ ಸಭೆ ಕೂಡ ಮಾಡುತ್ತೇವೆ ಎಂದರು .
ಇದೇ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಸಚಿವ ಪ್ರಿಯಾಂಕ್ ಖರ್ಗೆ, ಧರ್ಮಸ್ಥಳ ಚಲೋ ಯಾರಿಗಾಗಿ ಮಾಡಿದ್ರು? ಚಾಮುಂಡೇಶ್ವರಿ ಚಲೋ ಎರಡು ದಿನ ಮಾಡಿದ್ರು. ಮದ್ದೂರು ಚಲೋ ನಾಲ್ಕು ದಿನ ಮಾಡಿದವರು. ಬಿಜೆಪಿಯವರಿಗೆ ಬರುವುದು ಇಷ್ಟೇನಾ? ಎಂದು ವಾಗ್ದಾಳಿ ನಡೆಸಿದರು.
ಇನ್ನು ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾರು ಬೇಕಾದರೂ ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಬಹುದು. ಅದನ್ನು ಸಿಎಂ, ಡಿಸಿಎಂ ಎಐಸಿಸಿ ಅಧ್ಯಕ್ಷರು ತೀರ್ಮಾನಿಸುತ್ತಾರೆ ಎಂದರು.
Key words: Meeting, Kuruba community, ST, Minister, Priyank Kharge