ಜೇರುಸಲೇಂ,ಸೆಪ್ಟಂಬರ್,13,2025 (www.justkannada.in): ಇಸ್ರೇಲ್ ನಲ್ಲಿ ನಡೆದಿರುವ ಬೆಳವಣಿಗೆ ಮತ್ತು ವಾಸ್ತವ ಸಂಗತಿಗಳನ್ನು ಹೊರ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಇಸ್ರೇಲ್ ಗೆ ಭಾರತೀಯ ಪತ್ರಕರ್ತರ ನಿಯೋಗವನ್ನು ಆಹ್ವಾನಿಸಲಾಗಿತ್ತು ಎಂದು ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಭಾರತೀಯ ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.
ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ ಅವರು, ಇಸ್ರೇಲ್ ದೇಶ ಭಯೋತ್ಪಾದನೆ ವಿರುದ್ದ ಎದುರಿಸುತ್ತಿರುವ ಸವಾಲು, ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸತ್ಯದ ಸಂಗತಿಗಳನ್ನು ತಿಳಿಯಲಿ ಎನ್ನುವುದು ಈ ಪ್ರವಾಸದ ಆಶಯವಾಗಿತ್ತು ಎಂದರು.
ಸುವರ್ಣ ಟಿವಿ ಅಸೋಶಿಯೇಟ್ ಎಡಿಟರ್ ಪ್ರಶಾಂತ ನಾತು ಅವರು, ಇಸ್ರೇಲ್ ಅಧ್ಯಯನಶೀಲ ಪ್ರವಾಸ ಅನೇಕ ಸತ್ಯ ಸಂಗತಿಗಳನ್ನು ತಿಳಿಯಲು ಅನುಕೂಲವಾಯಿತು ಎಂದು ತಿಳಿಸಿ, ಇಸ್ರೇಲ್ ಅಂಬಾಸಿಡರ್ ಸೇರಿದಂತೆ ಎಲ್ಲ ಸಂಬಂದಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಇಸ್ರೇಲ್ ಕಾನ್ಸಲೆಟ್ ಪಿಆರ್ ರವಿಕಿರಣ್, ಹಿರಿಯ ಪತ್ರಕರಾದ ಚೀ.ಜ.ರಾಜೀವ್, ಮಧುನಾಯಕ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಹರೀಶ್ ಉಪಾದ್ಯಾಯ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪತ್ರಕರ್ತರು ಹಾಜರಿದ್ದರು .
Key words: Indian, journalists Delegation, visits, Israel