ಮಂಡ್ಯ,ಸೆಪ್ಟಂಬರ್,12,2025 (www.justkannada.in): ಮದ್ದೂರು ಗಲಭೆ ಕಾರಣದಿಂದ ಮಂಡ್ಯ ಹೆಚ್ಚುವರಿ ಎಸ್ ಪಿ ತಿಮ್ಮಯ್ಯರನ್ನ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಮದ್ದೂರು ಘಟನೆಗೂ, ಹೆಚ್ಚುವರಿ ಎಸ್ ಪಿ ತಿಮ್ಮಯ್ಯರನ್ನ ವರ್ಗಾವಣೆ ಸಂಬಂಧವಿಲ್ಲ. ಮಂಡ್ಯ ASP ತಿಮ್ಮಯ್ಯ ಅವಧಿ ಮುಗಿದಿತ್ತು. ಡಿಸೆಂಬರ್ ವರೆಗೆ ಮುಂದುವರೆಸುವಂತೆ ಹೇಳಿದ್ದೆ. ಆದರೆ ಸಾಮಾನ್ಯ ವರ್ಗಾವಣೆಯಂತೆ ವರ್ಗಾವಣೆಯಾಗಿದೆ. ಮಂಡ್ಯದಲ್ಲಿ ಎಎಸ್ಪಿ ಒಳ್ಳೇ ಕೆಲಸ ಮಾಡಿದ್ದಾರೆ ಎಂದರು.
ಸಿಪಿಐ ಶಿವಕುಮಾರ್ ಸಸ್ಪೆಂಡ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ಘಟನೆ ನಡೆದಾಗ ಸ್ಥಳದಲ್ಲಿಲ್ಲದ ಕಾರಣ ಸಿಪಿಐ ಅಮಾನತು ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ಮುಂದೆ ಇಂತಹ ಯಾವುದೇ ಘಟನೆ ನಡೆಯಬಾರದು ಕೇಸ್ ವರದಿ ಬರಲಿ ಎಂದರು.
Key words: Maddur riots, ASP, transfer, Minister, Chaluvarayaswamy