ಮೈಸೂರು, ಸೆಪ್ಟೆಂಬರ್, 12,2025 (www.justkannada.in): ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಸೆಪ್ಟಂಬರ್ 16 ಮಂಗಳವಾರ ಸಂಜೆ 6 ಗಂಟೆಗೆ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ನಡೆಯುತ್ತಿರುವ ಐಎಎಸ್/ಕೆಎಎಸ್ ಪರೀಕ್ಷಾ ಉಚಿತ ತರಬೇತಿ ಶಿಬಿರದಲ್ಲಿ ಮೈಸೂರು ಮೂಲದ 2023ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಕೆ.ಎಲ್. ಸೂರಜ್ ಭಾಗವಹಿಸಿ ಶಿಬಿರಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡುವರು.
ಇದೇ ಸಂದರ್ಭದಲ್ಲಿ ಮೈಸೂರು ಮೃಗಾಲಯ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸುವರು. ಅಖಿಲ ಭಾರತ ಸಹಕಾರ ಮಹಾಮಂಡಲದ ನಿರ್ದೇಶಕ ವೈ.ಎನ್. ಶಂಕರೇಗೌಡ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಟಿ.ಸಿ.ಸುದೀಪ, ರೋಹನ್ ರವಿಕುಮಾರ್, ಪ್ರೊ. ಹೊನ್ನಯ್ಯ, ಪ್ರೊ. ವಿ. ಜಯಪ್ರಕಾಶ್, ಎಸ್. ಗಣೇಶ್, ಡಾ. ಈ. ಶಿವಪ್ರಸಾದ್, ಯು.ಎಂ. ಶರದ್‌ರಾವ್, ಡಾ.ಕೃಷ್ಣ, ಡಾ.ಮೋಹನ್, ಡಾ.ಹೇಮಚಂದ್ರ, ರಾಜೀವ್‌ಶರ್ಮಾ, ಮಂಜುನಾಥ್ ಮಹದೇವಪ್, ಡಾ..ಕೃಪ, ಗಣೇಶ, ಡಾ.ಎಸ್.ಬಿ.ಎಂ.ಪ್ರಸನ್ನ, ಪ್ರೊ.ಸಿ.ಕೆ.ಕಿರಣ್ ಕೌಶಿಕ್, ಕೆ.ವೈ.ನಾಗೇಂದ್ರ ಭಾಗವಹಿಸುವರು ಎಂದು ಜ್ಞಾನಬುತ್ತಿ ಕಾರ್ಯದರ್ಶಿ ಹೆಚ್. ಬಾಲಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Mysore, Free, training camp, Gnanabutti