ಹೈಕೋರ್ಟ್ ​​ಗೆ ಬಾಂಬ್ ಬೆದರಿಕೆ, ಪರಿಶೀಲನೆ

ನವದೆಹಲಿ,ಸೆಪ್ಟಂಬರ್,12,2025 (www.justkannada.in): ಬಾಂಬ್ ಬೆದರಿಕೆ ಸಂದೇಶಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇದೀಗ ದೆಹಲಿ ಹೈಕೋರ್ಟ್ ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ದೆಹಲಿ ಹೈಕೋರ್ಟ್ ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವ ಕಿಡಿಗೇಡಿಗಳು 3 ಕಡೆ ಬಾಂಬ್ ಇಡಲಾಗಿದ್ದು ಮಧ್ಯಾಹ್ನ 2 ಗಂಟೆಯ ನಂತರ ಸ್ಫೋಟಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಬಾಂಬ್ ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ವಕೀಲರು ಹೊರಬಂದಿದ್ದು,  ಹೈಕೋರ್ಟ್ ಆವರಣದಲ್ಲಿ ಪರಿಶೀಲನೆ ನಡೆಯುತ್ತಿದೆ. ಪೊಲೀಸರು ಬಾಂಬ್ ನಿಷ್ಕ್ರಿಯದಳ, ಶ್ವಾನದಳ ಸ್ಥಳಕ್ಕೆ ಆಗಮಿಸಿದ್ದು,  ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದೆ. ಕೋರ್ಟ್ ಸಿಬ್ಬಂದಿ ಸೇರಿದಂತೆ ಎಲ್ಲರನ್ನೂ ಹೊರಗೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತಿದೆ.

Key words: Bomb threat, High Court, Delhi, investigation