ಶಾಲಾ ಮಕ್ಕಳಿಗೆ “ಪಾರಂಪರಿಕತೆ” ಅರಿವು ಮೂಡಿಸಿದ ಸಂಸದ ಯದುವೀರ್.

ಮೈಸೂರು,ಸೆಪ್ಟಂಬರ್,11,2025 (www.justkannada.in):   ಮೈಸೂರು-ಕೊಡಗು ಸಂಸದ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿ ಪಾರಂಪರಿಕ‌ ಕಟ್ಟಡಗಳ ಕುರಿತು ಅರಿವು ಮೂಡಿಸಿದರು.

ಮೈಸೂರಿನ ಕುಂಬಾರಕೊಪ್ಪಲಿನ ಸರ್ಕಾರಿ ಪಾಠಶಾಲೆಗೆ ಭೇಟಿ ನೀಡಿದ ಸಂಸದ ಯದುವೀರ್ ಅವರು, ಮಕ್ಕಳಿಗೆ ಪಾಠ- ಪ್ರವಚನ ಮಾಡಿದರು. ನಾವು ಪಾರಂಪರಿಕವಾಗಿ ಭಾರತೀಯ, ದಕ್ಷಿಣ ಭಾರತ, ಕರ್ನಾಟಕದ ಶೈಲಿ ಕಾಣಬಹುದು. ಪ್ಲಾಸ್ಟಿಕ್, ಸಿಮೆಂಟ್ ಇನ್ನಿತರೇ ಇವು ಪಾಶ್ಚಿಮಾತ್ಯ ಶೈಲಿ. ನಮ್ಮದೇ ಆದಂತಹ ಅನನ್ಯ ಶೈಲಿ ಉಲ್ಲೇಖಿಸಬೇಕಾಗಿದೆ. ನಮ್ಮ ಕಟ್ಟಡಗಳನ್ನ ಬೇರೆ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಹವಮಾನ ವೈಪರೀತ್ಯ ಉಂಟಾಗುತ್ತಿದೆ. ನಮಗೆ ಗಾಳಿ, ಬೆಳಕು ಬಳಕೆ ಅಧಿಕವಾಗಿ ಬೇಕಾಗುತ್ತದೆ. ಹೀಗಾಗಿ ಈ ವಾತಾವರಣ ನಮಗೆ ಹೆಚ್ಚು ಅವಶ್ಯಕ.ಅದ್ದರಿಂದ ಒಳ್ಳೆ ರೀತಿಯ ಕಟ್ಟಡಗಳನ್ನ ಉಳಿಸಿ‌ ಬೆಳೆಸಿ. ಪೂರ್ವಜರ ಆಸೆ, ಕನಸು ಹಳೆಯ ಕಟ್ಟಡಗಳಲ್ಲಿ ಹುದುಗಿದೆ. ಅವರ ನಡವಳಿಕೆಯನ್ನ ,ಆಚಾರ ವಿಚಾರಗಳನ್ನು ಉಳಿಸಿ‌ ಬೆಳೆಸಬೇಕಾಗಿದೆ. ಮೈಸೂರು ಅಂದರೆ ಕೇವಲ ಅರಮನೆ ಅಷ್ಟೆ ಅಲ್ಲ. ಮೈಸೂರಿನ ಭಾವನೆ ಉಳಿಸಿ, ಮುಂದಿನ ಪೀಳಿಗೆಗೆ ಉಣಬಡಿಸಬೇಕಿದೆ ಎಂದು ನುಡಿದರು.

ನಾವು ಸ್ವದೇಶಿ, ಭಾರತೀಯ ಉತ್ಫನ್ನ ಹೆಚ್ಚಾಗಿ ಬಳಸಬೇಕಿದೆ. ಪ್ರತಿಯೊಬ್ಬ ಮಗುವು ದೇಸಿ ಉತ್ಪನ್ನಗಳ ಕಡೆಗೆ ಒಲವು ತೋರಬೇಕಿದೆ. ಜೀವನದಲ್ಲೂ ಕೂಡ ಸ್ವದೇಶ ವಸ್ತು ಬಳಸುವುದು ಅನುಕೂಲಕರ. ಓಕಲ್ ಫಾರ್ ಲೋಕಲ್ ಘೋಷಣೆಯಂತೆ ಸ್ವದೇಶಿಗೆ ಹೆಚ್ಚು ಮಹತ್ವ ನೀಡಿ. ಭಾರತಕ್ಕೆ ಹೆಚ್ಚು ಅನುಕೂಲವಾಗುವ ಉತ್ಪನ್ನಗಳನ್ನ ಬಳಸಿ ಎಂದು ಸಂಸದ ಯದುವೀರ್ ಕಿವಿಮಾತು ಹೇಳಿದರು.

ಮುಂದಿನ ಪೀಳಿಗೆಗೆ ಸ್ಮರಣೆ ಮಾಡುವ ಕೆಲಸ ಮಾಡಿ. ಪರಿಸರ ಉಳಿಸಿ, ಕಾಡು ಬೆಳೆಸಿ. ಪ್ರಕೃತಿ ಹಾಳು ಮಾಡುವ ಕೆಲಸ ಮಾಡಬೇಡಿ. ಕಾರ್ಬನ್ ಉತ್ಫಾದಿಸುವ ವಸ್ತುಗಳನ್ನ ಕಡಿಮೆ ಮಾಡಿ. ಮರಗಳನ್ನ ಹೆಚ್ಚೆಚ್ಚು ಬೆಳೆಸುವ ಕೆಲಸ ಮಾಡಿ. ತ್ಯಾಜ್ಯವಸ್ತುಗಳನ್ನ ಬಳಸಿ ಕಟ್ಟಡ ನಿರ್ಮಾಣ ಮಾಡಬಹುದು. ಅಂತಹ ಕ್ರಮಗಳತ್ತ ಎಲ್ಲರೂ ಚಿತ್ತ ಹರಿಸಿ ಎಂದು ಯದುವೀರ್ ತಿಳಿಸಿದರು.

Key words: Mysore, MP, Yadavir, school, children, aware of “heritage