ವಿಧಾನ ಪರಿಷತ್ ಸದಸ್ಯರಾಗಿ ನಾಲ್ವರು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು,ಸೆಪ್ಟಂಬರ್,11,2025 (www.justkannada.in): ವಿಧಾನ‌ ಪರಿಷತ್‌ ಗೆ ನಾಮನಿರ್ದೇಶನಗೊಂಡ ನೂತನ ನಾಲ್ಕು ಸದಸ್ಯರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾಗಿ ಕೆ.ಶಿವಕುಮಾರ್, ರಮೇಶ್ ಬಾಬು, ಆರತಿ ಕೃಷ್ಣ, ಜಕ್ಕಪ್ಪನವರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ವಿಧಾನ‌ ಪರಿಷತ್‌ಗೆ ನಾಮನಿರ್ದೇಶನಗೊಂಡ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಿದರು.

ರಾಜ್ಯ ಸರಕಾರ ಮೇಲ್ಮನೆ ಸದಸ್ಯರನ್ನಾಗಿ  ಹಿರಿಯ ಪತ್ರಕರ್ತ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಮೈಸೂರು ಬ್ಯುರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ. ಶಿವಕುಮಾರ್ ಮತ್ತು ರಮೇಶ್ ಬಾಬು,  ಆರತಿ ಕೃಷ್ಣ, ಜಕ್ಕಪ್ಪನವರ್ ಅವರನ್ನ ನಾಮ ನಿರ್ದೇಶನ ಮಾಡಿತ್ತು.

Key words: Vidhanasoudha, sworn, Legislative Council, members