ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ: ಮೈಸೂರು ವಿದ್ಯಾರ್ಥಿನಿಯರಿಗೆ “ನಾಟ್ಯ ಕಲಾ ಜ್ಯೋತಿ, ನೃತ್ಯ ತಳಿರ್’’  ಬಿರುದು ಪ್ರದಾನ

ಮೈಸೂರು,ಸೆಪ್ಟಂಬರ್,10,2025 (www.justkannada.in): ಭರತನಾಟ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ  ಮೈಸೂರು ವಿದ್ಯಾರ್ಥಿನಿಯರಾದ ಮಿನತಿ ಅಂಜನ್ ಮತ್ತು ಕಶ್ವಿ ಅಂಜನ್ ಅವರು ‘’ನಾಟ್ಯ ಕಲಾ ಜ್ಯೋತಿ”  ಎಂಬ ಬಿರುದು ಗಳಿಸಿದ್ದಾರೆ.

ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್, ಕನಕದಾಸನಗರ (ದಟ್ಟಗಳ್ಳಿ) ಕ್ಯಾಂಪಸ್‌ ನ ವಿದ್ಯಾರ್ಥಿನಿ ಸಹೋದರಿಯರಾದ ಮಿನತಿ ಅಂಜನ್ ಮತ್ತು ಕಶ್ವಿ ಅಂಜನ್ ರವರುಗಳು ಭರತನಾಟ್ಯದ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ವಿಶ್ವದಾಖಲೆಯೊಂದಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದುಕೊಟ್ಟಿದ್ದಾರೆ. ಈ ಇಬ್ಬರು ಸಹೋದರಿಯರು, ಪುಣೆ ಮೂಲದ ನೃತ್ಯಕಲಾ ನಿಕೇತನ ಸಂಸ್ಥೆಯ ವಿದುಷಿ ಮಾಧುರಿ ಪ್ರತಿಕ್ ಗಾಯಕ್ವಾಡ್ ಅವರ ಮಾರ್ಗದರ್ಶನದಲ್ಲಿ, ಕಳೆದ ಎರಡು ವರ್ಷಗಳಿಂದ ಕಲಾಕ್ಷೇತ್ರ ಶೈಲಿಯ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಲ್ಪಕಾಲದಲ್ಲೇ ತಮ್ಮ ಪ್ರತಿಭೆ ಮತ್ತು ಶ್ರಮದಿಂದ ಅವರು ಗೌರವಾನ್ವಿತ ಬಿರುದುಗಳನ್ನು ಗಳಿಸಿದ್ದಾರೆ.

ಜ್ಯಾಕಿ ವರ್ಲ್ಡ್ ರೆಕಾರ್ಡ್ಸ್ – 2025 : “ನಾಟ್ಯ ಕಲಾ ಜ್ಯೋತಿ”

ಸಿರ್ಕಾಳಿ ಸಂಗಮಂ 2025ರಲ್ಲಿ ಭಾರತದೆಲ್ಲೆಡೆಯಿಂದ 630ಕ್ಕೂ ಹೆಚ್ಚು ಭರತನಾಟ್ಯ ಕಲಾವಿದರು ಸೇರಿಕೊಂಡು ವಿವಿಧ ಸಾಂಸ್ಕೃತಿಕ ವಿಷಯಗಳ ಮೇಲೆ ಭರತನಾಟ್ಯ ಪ್ರದರ್ಶಿಸಿದರು. ಈ ಮಹಾ ಕಾರ್ಯಕ್ರಮವು “ಅತಿದೊಡ್ಡ ಭರತನಾಟ್ಯ ಸಮೂಹ ಪ್ರದರ್ಶನ” ಎಂಬ ವಿಶ್ವದಾಖಲೆಯನ್ನೂ ನಿರ್ಮಿಸಿತು. ಈ ದಾಖಲೆ ಪ್ರಯತ್ನದಲ್ಲಿ ಭಾಗವಹಿಸಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮಿನತಿ ಮತ್ತು ಕಶ್ವಿ ಅಂಜನ್ ಅವರಿಗೆ “ನಾಟ್ಯ ಕಲಾ ಜ್ಯೋತಿ” ಎಂಬ ಬಿರುದು ಗಳಿಸುವಲ್ಲಿ ಇಬ್ಬರೂ ಸಹೋದರಿಯರು ಯಶಸ್ವಿಯಾಗಿದ್ದಾರೆ.

AJMA (Art Journey Mentoring Association) “ನೃತ್ಯ ತಆರ್’ : ಕುಂಭಕೋಣಂನ ಪವಿತ್ರ ಅರುಳ್ಳಿಗು ಕಬರ್ತೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ “ನಾಟ್ಯ ಸೇನೈ 2.0” ಕಾರ್ಯಕ್ರಮದಲ್ಲಿ, ಮಿನತಿ ಮತ್ತು ಕಶ್ವಿ ಅಂಜನ್ ಅವರಿಗೆ AJMA ವತಿಯಿಂದ “ನೃತ್ಯ ತಳಿರ್” ಬಿರುದು ಪ್ರದಾನ ಮಾಡಲಾಯಿತು. ಈ ಸಮಾರಂಭದಲ್ಲಿ ಹಾಜರಿದ್ದ ಪದ್ಮಶ್ರೀ ಆರ್. ಮುತುಕ್ಕನ್ನಮ್ಮಲ್ ಅವರು, ಭರತನಾಟ್ಯವನ್ನು ದೈವಿಕ ಕಲೆಯಾಗಿ ಉಳಿಸಿಕೊಂಡು ಹೋಗುವಲ್ಲಿ ಯುವ ಕಲಾವಿದರ ಸಮರ್ಪಣೆ ಮತ್ತು ಶ್ರಮವನ್ನು ಪ್ರಶಂಸಿಸಿದರು.

ಮಿನತಿ ಮತ್ತು ಕಶ್ವಿ ಅಂಜನ್ ಮುಂದುವರೆದು ಕಠಿಣ ಅಭ್ಯಾಸದ ಮೂಲಕ ಮೈಸೂರಿನ ಹೆಮ್ಮೆ ಪ್ರತಿನಿಧಿಸಿ, ಭರತನಾಟ್ಯವನ್ನು ಕೇವಲ ನೃತ್ಯವಷ್ಟೇ ಅಲ್ಲದೆ ಬದುಕಿನ ಶೈಲಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಗುರಿಯನ್ನು ಹೊಂದಿದ್ದಾರೆ.

ನೈಪುಣ್ಯ ಶಾಲೆಯ ವಿದ್ಯಾರ್ಥಿನಿಯರ ವಿಶ್ವದಾಖಲೆಯ ಈ ಸಾಧನೆಯು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಘು ಅವರು ಶ್ಲಾಘಿಸಿದ್ದು, ಮಿನತಿ ಮತ್ತು ಕಶ್ವಿಯವರು ನಾಟ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಿ ಭಾರತದ ಸಾಂಸ್ಕೃತಿಕ ಪರಂಪರೆಯ ನಕ್ಷತ್ರಗಳಾಗಿ ಮಿನುಗಲಿ ಎಂದು ಹಾರೈಸಿದ್ದಾರೆ.

Ket words: Achievement, Bharatanatyam, Mysore, girl, students, awarded