ಬೆಂಗಳೂರು, ಸೆ.೧೦, ೨೦೨೫: ರಾಜ್ಯದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಯಾದ ಶ್ರೀಜಯದೇವ ಹೃದ್ರೋಗ ಸಂಸ್ಥೆ ನೂತನ ನಿರ್ದೇಶಕರಾಗಿ ಡಾ. ದಿನೇಶ್ ಅವರನ್ನು ನೇಮಕ ಮಾಡಲಾಗಿದೆ.
ಈ ತನಕ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ದಿನೇಶ್ ಅವರನ್ನು ಇದೀಗ ಜಯದೇವ ಹೃದ್ರೋಗ ಸಂಸ್ಥೆಯ ಹೊಸ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ, ಈ ಸಂಬಂದ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ವಾರವಷ್ಟೆ ನೂತನ ನಿರ್ದೇಶಕರ ಆಯ್ಕೆ ಸಂಬಂಧ ಸಂದರ್ಶನ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಈ ಸಂದರ್ಶನ ನಡೆಸಿದ್ದರು. ಆದರೆ ನಿವೃತ್ತ ಪ್ರಾಧ್ಯಾಪಕರೊಬ್ಬರು ಕೋರ್ಟ್ ಮೊರೆ ಹೊಕ್ಕಿದ್ದ ಕಾರಣ ಫಲಿತಾಂಶ ಪ್ರಕಟಿಸಿರಲಿಲ್ಲ. ಇದೀಗ ಕೋರ್ಟ್ ಕೇಳಿದ್ದ ಮಾಹಿತಿಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಯ್ಕೆಗೊಂಡ ಅಭ್ಯರ್ಥಿ ಹೆಸರು ಪ್ರಕಟಿಸಲು ಅನುಮತಿ ನೀಡಿತು.
ಹಿನ್ನೆಲೆ:
ಡಾ. B. ದಿನೇಶ್ ಅವರು Interventional Cardiologist ಮತ್ತು Professor in the Department of Cardiology ಆಗಿ ಮೈಸೂರು ಶಾಖೆಯಲ್ಲಿ (Sri Jayadeva Institute, Mysuru) ಸೇವೆ ಸಲ್ಲಿಸುತ್ತಿದ್ದಾರೆ .
‘Samaja Seva Ratna’ ಪ್ರಶಸ್ತಿಯನ್ನು ಇವರಿಗೆ Kannada Film Chamber, Bengaluruಯಿಂದ 5 ನವೆಂಬರ್ 2024 ರಂದು ನೀಡಲಾಗಿದೆ. ಇದು ಅವರ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆಗೆ ದೊರಕಿದ ಗೌರವವೇ ಆಗಿದೆ .
ಪರಿಚಯ:
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೊಕಿನ ದೊಡ್ಡೆಬಾಗಿಲು ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ.ದಿನೇಶ್, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದರು. ಬಳಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ. ಕೆ.ಆರ್.ಆಸ್ಪತ್ರೆಯಲ್ಲಿ ಎಂ.ಡಿ.ವ್ಯಾಸಂಗ. ಬಳಿಕ ಮೈಸೂರು ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿಭಾಗದಲ್ಲಿ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕರಾಗಿ ಸೇವೆ.
ಪ್ರತಿಷ್ಠಿಯ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ “ ಡಿ.ಎಂ. ಕಾರ್ಡಿಯಾಲಜಿ “ ಪದವಿ ಪಡೆದ ಡಾ. ದಿನೇಶ್, ಬಳಿಕ ಪ್ರಾಧ್ಯಾಪಕರಾಗಿ ಮುಂಬಡ್ತಿ ಪಡೆದು ಜಯದೇವ ಸಂಸ್ಥೆ ಮೈಸೂರು ಶಾಖೆಗೆ ನಿಯೋಜನೆ. ಇಲ್ಲಿನ “ಬಿ-ಯುನಿಟ್ “ ಮುಖ್ಯಸ್ಥರಾಗಿ ಕಾರ್ಡಿಯಾಲಜಿ ಪ್ರೊಫೆಸರ್ ಆಗಿ ಸೇವೆ.
ಮಂದಸ್ಮಿತ :
ಎಷ್ಟೆ ಕಾರ್ಯೊತ್ತಡವಿದ್ದರು ಮಂದಸ್ಮಿತರಾಗಿಯೇ ರೋಗಿಗಳ ಜತೆ ಒಡನಾಡ ಹೊಂದುವ ಡಾ.ದಿನೇಶ್, ಗ್ರಾಮೀಣ ಭಾಗದ ರೋಗಿಗಳ ಜತೆ ಅವರದ್ದೆ ಗ್ರಾಮ್ಯ ಭಾಷೆಯಲ್ಲಿ ವ್ಯವಹರಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವರು.
key words: Sri Jayadeva Heart Institute, Bangalore, Dr. Dinesh, appointed as Director.
SUMMARY:
Sri Jayadeva Heart Institute: Dr. Dinesh appointed as Director.
Dr. Dinesh has been appointed as the new director of the state’s prestigious heart institute, Sri Jayadeva Heart Institute.
Dr. Dinesh, who was working at the Jayadeva Heart Institute in Mysore till now, has now been selected as the new director of the Jayadeva Heart Institute, the state government has issued an official order in this regard.
The interview for the selection of the new director was held last week. Chief Minister Siddaramaiah himself conducted this interview. However, the results were not announced because a retired professor had approached the court. Now, after the information sought by the court was provided, the court has allowed the name of the selected candidate to be announced.