ಮಂಡ್ಯ,ಸೆಪ್ಟಂಬರ್,10,2025 (www.justkannada.in): ನಾವು ಟಿಪ್ಪು, ಅವರ ಅಪ್ಪನನ್ನೇ ಬಿಡಲಿಲ್ಲ. ಕಲ್ಲು ಹೊಡೆದವರನ್ನ ಸಮಾಧಿ ಮಾಡುವ ತಾಕತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಗುಡುಗಿದರು.
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ನಮಗೆ ತೊಡೆ ತಟ್ಟಿ ಸವಾಲು ಹಾಕಬೇಡಿ ತೊಡೆ ಮುರಿಯುತ್ತೇವೆ. ತಲೆಯನ್ನೂ ತೆಗೆಯುತ್ತೇವೆ . ಹಿಂದೂಗಳ ವಿಷಯದಲ್ಲಿ ರಾಜಕಾರಣ ಮಾಡಲ್ಲ. ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಗಂಟು ಮೂಟೆ ಕಟ್ಟಿ ಹೊರಡಿ. ಮುಸ್ಲೀಮರು ದೇವಸ್ತಾನದ ಮುಂದೆ ಬರಬಾರದು ಎಂದು ಹೇಳಿದ್ದೀವಾ..? ಮಸೀದಿ ಮುಂದೆ ಬರಬಾರದು ಎಂಬುದು ಸರಿಯೇ? ಇಡೀ ಭೂಮಿ ನಮ್ಮದು ಅಂದರೆ ನೀವು ಎಲ್ಲಿಗೆ ಹೋಗುತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಮುಂದಿನ ಜನ್ಮದಲ್ಲಿ ಮುಸ್ಲೀಂ ಆಗಿ ಹುಟ್ಟುತ್ತೇನೆ ಎಂಬ ಕಾಂಗ್ರೆಸ್ ಶಾಸಕ ಸಂಗಮೇಶ್ ಹೇಳಿಕೆ ಕುರಿತು ಕಿಡಿಕಾರಿದ ಎಂಎಲ್ ಸಿ ಸಿ.ಟಿ ರವಿ, ಇಸ್ಲಾಂನಲ್ಲಿ ಪುನರ್ಜನ್ಮಕ್ಕೆ ಅವಕಾಶವಿಲ್ಲ. ಮುಂದಿನ ಜನ್ಮ ಯಾಕೆ ಕಾಯುತ್ತೀಯಾ ಈಗಲೇ ಆಗಿಬಿಡು ಎಂದು ಹರಿಹಾಯ್ದರು.
Key words: Maddur riots, MLC, CT Ravi