ಬೆಂಗಳೂರು,ಸೆಪ್ಟಂಬರ್,10,2025 (www.justkannada.in): ಮದ್ದೂರಿನಲ್ಲಿ ಗುಪ್ತಚರ ಇಲಾಖೆ, ಪೊಲೀಸರ ವೈಪಲ್ಯದಿಂದಾಗಿ ಗಲಭೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಮದ್ದೂರಿನಲ್ಲಿ ಪೊಲೀಸರ ವೈಪಲ್ಯದಿಂದ ಗಲಭೆ ನಡೆದಿದೆ. ಮಹಿಳೆಯರ ಭದ್ರತೆ ಕಾನ್ಸ್ ಟೇಬಲ್ ಇರಲಿಲ್ಲ. ದೊಡ್ಡ ಮೆರವಣಿಗೆ ನಡೆಯುತ್ತಿದ್ದರೂ ಎಸ್ಪಿ ಇರಲಿಲ್ಲ ಗುಪ್ತಚರ ಇಲಾಖೆ ವೈಪಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ಕಲ್ಲು ಹಿಡಿದು ಮಸೀದಿ ಒಳಗೆ ಕೂರುತ್ತಾರೆ ಅಂದರೆ ಗುಪ್ತಚರ ಇಲಾಖೆ ಪೊಲೀಸರ ವೈಪಲ್ಯವೇ ಕಾರಣ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
Key words: Intelligence department, police, failure, Maddur riots, BY Vijayendra