ಕಲ್ಲು ತೂರಾಟ ಪ್ರಕರಣ : ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 500 ಜನರ ವಿರುದ್ಧವೂ ‘FIR’

ಮಂಡ್ಯ ,ಸೆಪ್ಟಂಬರ್,9,2025 (www.justkannada.in):  ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಘಟನೆ ಖಂಡಿಸಿ ನಿನ್ನೆ ಮದ್ದೂರಿನಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರ ವಿರುದ್ದವೂ  ಮದ್ದೂರು ಟೌನ್ ಠಾಣಾ ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ.

ಪ್ರತಿಭಟನೆ ವೇಳೆ ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಹಾಗೆಯೇ ಕಲ್ಲು ತೂರಾಟ, ಬಾವುಟ ಬಂಟಿಂಗ್ಸ್ ಕಿತ್ತೆಸೆತ, ಮಸೀದಿಗೆ ನುಗ್ಗಲು ಯತ್ನಿಸಿದ ಆರೋಪದ ಮೇಲೆ ಪ್ರತಿಭಟನಾಕಾರರ ವಿರುದ್ಧ ಎರಡು ಪ್ರತ್ಯೇಕ ಎರಡು ಎಫ್ಐ ಆರ್ ದಾಖಲು ಮಾಡಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರ ಮೇಲೆ ಹಲ್ಲೆ ಎಂದು ಕೇಸ್ ದಾಖಲಿಸಲಾಗಿದೆ. ಮೆರವಣಿಗೆ ವೇಳೆ ಕಲ್ಲುತೂರಾಟ ನಡೆಸಿದ ಸೌಮ್ಯ, ಪಲ್ಲವಿ, ರಮ್ಯಾ ಸೇರಿದಂತೆ ಒಟ್ಟು 500 ಜನರ ವಿರುದ್ದ  ಬಿಎನ್ ಎಸ್ ಸೆಕ್ಷನ್ 189(2), 189(4), 121,121(2) 190 ಅಡಿ ಪ್ರಕರಣ ದಾಖಲಾಗಿದೆ.

Key words: Maddur, Stone pelting case, FIR, against, 500 people , protest