ಬಿಜೆಪಿಯಿಂದ ‘ಚಾಮುಂಡಿ ಬೆಟ್ಟ ಚಲೋ’: ಶಾಸಕ ಶ್ರೀವತ್ಸ ಸೇರಿ ಹಲವರು ಪೊಲೀಸರ ವಶಕ್ಕೆ

ಮೈಸೂರು,ಸೆಪ್ಟಂಬರ್,9,2025 (www.justkannada.in):  ಸಾಹಿತಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟ ಚಲೋ ಪೊಲೀಸರು ತಡೆ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಶಾಸಕ ಶ್ರೀವತ್ಸ ಸೇರಿ ಹಲವರನ್ನ ಪೊಲೀಸರು ವಶಕ್ಕೆ ಪಡೆದರು.

ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದರೇ ದಲಿತ ಪರ ಸಂಘಟನೆಗಳು ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆ ಬೆಂಬಲಿಸಿ ಚಾಮುಂಡಿ ಬೆಟ್ಟ ಚಲೋಗೆ ಮುಂದಾಗಿದ್ದರು. ಆದರೆ ಎರಡಕ್ಕೂ ಪೊಲೀಸರು ಅನುಮತಿ ನೀಡಿರಲಿಲ್ಲ. ಹೀಗಾಗಿ ಎರಡು ಕಾರ್ಯಕ್ರಮಗಳಿಗೂ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಬಿಜೆಪಿ ಕುರುಬರಹಳ್ಳಿ  ಸರ್ಕಲ್ ನಿಂದ  ಚಾಮುಂಡಿ ಬೆಟ್ಟದವರೆಗೆ ಚಾಮುಂಡಿ  ಬೆಟ್ಟ ಚಲೋ ಮುಂದಾಗಿದ್ದು  ಸ್ಥಳಕ್ಕೆ ಆಗಮಿಸಿದ ಶಾಸಕ ಶ್ರೀವತ್ಸ ಸೇರಿ ಹಲವರನ್ನ ಪೊಲೀಸರು ವಶಕ್ಕೆ ಪಡೆದರು.  ಈ ವೇಳೆ ಕನಿಷ್ಠ ನಿಂತುಕೊಳ್ಳಲು ಅವಕಾಶ ಕೊಡಿ ಎಂದ ಶ್ರೀವತ್ಸ ಮನವಿ ಮಾಡಿದರು.

Key words: BJP, Chamundi Betta Chalo,  MLA, Srivatsa, police custody