ಬೆಂಗಳೂರು,ಸೆಪ್ಟಂಬರ್,8,2025 (www.justkannada.in): ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲುತೂರಾಟ ಖಂಡಿಸಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮಸೀದಿ ಮುಂದೆ ಮೆರವಣಿಗೆ ಹೋಗುವಾಗ ಗಲಾಟೆಯಾಗಿದೆ. ಗುಂಪು ಕಟ್ಟಿಕೊಡು ಗಲಾಟೆ ಮಾಡಲು ಶುರಮಾಡಿದ್ದಾರೆ ಹಾಗಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಪ್ರಕರಣ ಸಂಬಂಧ 21 ಜನರ ಆರೋಪಿಗಳ ಬಂಧನವಾಗಿದೆ.
ಹಿಂದೂ ಆಗಲಿ ,ಮುಸ್ಲಿಮಾಗಲಿ ಯಾರೇತಪ್ಪೂ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ. ಮದ್ದೂರು ಬಿಟ್ಟು ಎಲ್ಲೂ ಗಲಾಟೆ ಆಗಿಲ್ಲ. ಬಿಜೆಪಿಯವರು ಪ್ರಚೋದನೆ ಮಾಡುವಲ್ಲಿ ಸುಳ್ಳು ಹೇಳುವಲ್ಲಿ ನಿಸ್ಸಿಮರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
Key words: Maddur, Roit, BJP, lying, CM, Siddaramaiah