ಬೆಂಗಳೂರು,ಸೆಪ್ಟಂಬರ್,5, 2025 (www.justkannada.in): ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವ ಪಾತ್ರವಿಲ್ಲ. ಸಿಎಂ ಪತ್ನಿ ಪಾರ್ವತಿ ಅವರ ಮೇಲೆ ಏನೂ ಆರೋಪ ಇಲ್ಲ. ಸುಮ್ಮನೆ ಕಳಂಕ ತರುವ ಕೆಲಸ ಆಯಿತು. ಕೋರ್ಟ್ ಗಳು ಸಹ ಯಾವುದೇ ತಪ್ಪಿಲ್ಲ ಎಂದಿವೆ ಎಂದರು.
ಪ್ರಕರಣ ಸಂಬಂಧ ಅಧಿಕಾರಿಗಳ ತಪ್ಪಿದ್ದರೇ ಕ್ರಮ ಕೈಗೊಳ್ಳುತ್ತೇವೆ. ಕೋರ್ಟ್ ಹೇಳಿದ ಮೇಲೆ ಮುಗಿದು ಹೋಯ್ತು ಕೋರ್ಟ್ ಗೆ ವ್ಯತಿರಿಕ್ತವಾಗಿರುತ್ತೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: Muda case, clean chit, CM, Minister, M.B. Patil