ಬೆಂಗಳೂರು,ಸೆಪ್ಟಂಬರ್,2,2025 (www.justkannada.in): ಧರ್ಮಸ್ಥಳ ಪ್ರಕರಣ ಕುರಿತು ಎಸ್ ಐಟಿ ತನಿಖೆ ನಡೆಯುತ್ತಿದೆ. ಹೀಗಾಗಿ ಎನ್ ಐಎ ತನಿಖೆಗೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಧರ್ಮಸ್ಥಳ ಪ್ರಕರಣವನ್ನ ಎನ್ ಐಎ ತನಿಖೆಗೆ ಬಿಜೆಪಿ ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎನ್ ಐಎ ತನಿಖೆ ಮಾಡೋದಿದ್ರೆ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ನಾವು ತನಿಖೆಯನ್ನು ಎನ್ ಐಎಗೆ ಕೊಡುವುದಿಲ್ಲ. ಈಗಾಗಲೇ ಪ್ರಕರಣ ಬಗ್ಗೆ ಎಸ್ ಐಟಿ ತನಿಖೆ ಮಾಡುತ್ತಿದೆ ಎಂದರು.
ಸೌಜನ್ಯ ನಿವಾಸಕ್ಕೆ ಬಿಜೆಪಿ ನಾಯಕರು ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಅವರ ಉದ್ದೇಶ ಏನಿದೆಯೋ ಗೊತ್ತಿಲ್ಲ. ಪ್ರಕರಣದ ತನಿಖೆಗೆ ಅಡ್ಡಿ ಮಾಡುವ ಪ್ರಯತ್ನ ಬರಬಹುದು. ತನಿಖೆಯಲ್ಲಿ ತಪ್ಪಿದ್ದರೆ ಇನ್ನೊಂದು ಏಜೆನ್ಸಿ ಬರುತ್ತೆ ಎಮದರು.
ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೋಹಂತಿ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಮೋಹಂತಿ ಧರ್ಮಸ್ಥಳ ಪ್ರಕರಣ ಬಗ್ಗೆಯಷ್ಟೆ ಮಾತನಾಡಲು ಬರುವುದಿಲ್ಲ. ಬೇರೆ ಬೇರೆ ವಿಚಾರದ ಬಗ್ಗೆಯೂ ಚರ್ಚೆ ಗೆ ಬರುತ್ತಾರೆ. ಚಿನ್ನಯ್ಯ ಏನು ಹೇಳಿದ್ದಾನೋ ಅದರ ಮೇಲೆ ಚರ್ಚೆಯಾಗುತ್ತದೆ ಎಂದರು.
Key words: Dharmasthala case, NIA, investigation, Home Minister, Parameshwar