ಶಿವಮೊಗ್ಗ,ಸೆಪ್ಟಂಬರ್,2,2025 (www.justkannada.in): ಧರ್ಮಸ್ಥಳಕ್ಕೆ ಅಪಪ್ರಚಾರವನ್ನುಂಟು ಮಾಡಲು ಧರ್ಮದ್ರೋಹಿಗಳು ಷಡ್ಯಂತ್ರ ಮಾಡಿದ್ದಾರೆ. ಸರ್ಕಾರ ಧರ್ಮಸ್ಥಳ ಪ್ರಕರಣವನ್ನ ಎನ್ ಐಎ ತನಿಖೆಗೆ ನೀಡಲಿ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಧರ್ಮದ್ರೋಹಿಗಳು ಷಡ್ಯಂತ್ರ ಮಾಡಿದ್ದಾರೆ. ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ವೀರೇಂದ್ರ ಹೆಗಡೆ ಅವರಿಗೂ ಅಪಮಾನ ಮಾಡಿದ್ದಾರೆ. ಧರ್ಮದ್ರೋಹಿಗಳ ಷಡ್ಯಂತ್ರ ಯಶಸ್ವಿಯಾಗಲ್ಲ ಎಂದರು.
ವೀರೇಂದ್ರ ಹೆಗಡೆಯವರ ಬೆಂಬಲವಾಗಿ ಇರುತ್ತೇವೆ. ಹಿಂದು ಧರ್ಮಕ್ಕೆ ಜಯ ಸಿಗುತ್ತೆ. ಮಂಜುನಾಥನಿಗೆ ಅನ್ಯಾಯವಾಗಲು ಬಿಡಲ್ಲ. ಪ್ರಕರಣವನ್ನ ಎನ್ ಐಎ ತನಿಖೆಗೆ ವಹಿಸಬೇಕು ಎಂದು ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದರು.
Key words: KS Eshwarappa, government, Dharmasthala case, investigation, NIA