Thursday, September 17, 2026

BDA Apartments

ಟ್ವಟ್ಟರ್ ಫಾಲೋವರ್ಸ್: ‘ಕಿಂಗ್’ ಶಾರುಖ್ ! BDA JK_Adv BDA Adv
Home Cinema ಟ್ವಟ್ಟರ್ ಫಾಲೋವರ್ಸ್: ‘ಕಿಂಗ್’ ಶಾರುಖ್ !

ಟ್ವಟ್ಟರ್ ಫಾಲೋವರ್ಸ್: ‘ಕಿಂಗ್’ ಶಾರುಖ್ !

ಬೆಂಗಳೂರು, ಅಕ್ಟೋಬರ್ 16, 2019 (www.justkannada.in): ಶಾರುಖ್ ಖಾನ್‌ಗೆ ಟ್ವಿಟರ್‌ನಲ್ಲಿರುವ ಫಾಲೋವರ್‌ಗಳ ಸಂಖ್ಯೆ 39 ದಶಲಕ್ಷ ದಾಟಿದೆ!

ಹೌದು. ಕಿಂಗ್ ಖಾನ್ ದಾಖಲೆ ಫಾಲೋವರ್ಸ್ ಖುಷಿ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಕಿಂಗ್ ಖಾನ್‌ಗೆ ಬೇರಾರೂ ಸಾಟಿಯಿಲ್ಲ ಎಂದು ಅವರ ಪಕ್ಕಾ ಅಭಿಮಾನಿಗಳು ಸಂತಸದಿಂದ ಜೈಕಾರ ಹಾಕುತ್ತಿದ್ದಾರೆ.

ಇತ್ತೀಚೆಗೆ ತಮ್ಮ #AskSRK ಸೆಶನ್‌ ಒಂದರಲ್ಲಿ ಅಭಿಮಾನಿಯೊಬ್ಬರು, “ತಾವೇಕೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವಲ್ಲ” ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದ ಶಾರುಖ್ ಖಾನ್‌, “ನಾನೇ ಬಾಲಿವುಡ್” ಎಂದಿದ್ದರು.