ಧರ್ಮಸ್ಥಳ,ಸೆಪ್ಟಂಬರ್,1,2025 (www.justkannada.in): ಹಿಂದೂ ಧರ್ಮದ ವಿರುದ್ದ ಸಂಚು ಮಾಡಿದ್ರೆ ಸರ್ವನಾಶ ಖಚಿತ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ಇಂದು ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್, ಧರ್ಮಸ್ಥಳ ಕೇಸ್ ನಲ್ಲಿ ಎಸ್ ಐಟಿ ದಾರಿತಪ್ಪಿಸುವ ದುಷ್ಟಕೂಟವನ್ನ ಮಂಜುನಾಥನೇ ಶಿಕ್ಷಿಸಲಿ. ಶವಗಳನ್ನ ಹೂತಿದ್ದಾಗಿ ಹೇಳಿಕೆ ಸಂಬಂಧ ತನಿಖೆ ಸ್ವಾಗತಾರ್ಹ. ಇದೇ ನೆಪದಲ್ಲಿ ಧರ್ಮಸ್ಯಳ ಹೆಸರು ಕೆಡಿಸುವುದು ಸರಿಯಲ್ಲ ಸತ್ಯ ಹೊರಬರುತ್ತಿದೆ ಸ್ವಾಮಿಯ ಪ್ರಭಾವ ಈಗ ಕಾಣುತ್ತಿದೆ ಎಂದರು.
ಕಾಂಗ್ರೆಸ್ ಒಬ್ಬ ಶಾಸಕನೂ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದಿಲ್ಲ ಕಾಂಗ್ರೆಸ್ ಶಾಸಕರು ಆಗಮಿಸಿ ಭಕ್ತರಿಗೆ ದೈರ್ಯ ತುಂಬಬೇಕಿತ್ತು. ಹಿಂದೂ ಧರ್ಮದ ವಿರುದ್ದ ಸಂಚು ಮಾಡಿದ್ರೆ ಸರ್ವನಾಶ ಖಚಿತ. ಹಿಂದೂ ಎದ್ದರೆ ತಡೆಯಲಾಗಲ್ಲ ಸರ್ವನಾಶ ಮಾಡುವ ಶಕ್ತಿ ಇದೆ ಎಂದು ಎಸ್ ಆರ್ ವಿಶ್ವನಾಥ್ ಗುಡುಗಿದರು.
Key words: Dharmasthala, Hinduism, bjp, MLA, S.R. Vishwanath