ಧರ್ಮಸ್ಥಳ ಪ್ರಕರಣ: ಎಸ್.ಐ.ಟಿ ಎದುರು ಹಾಜರಾದ ಹುಡುಗಿ ಕಿಡ್ನಾಪ್ “ ಐ-ವಿಟ್ನೆಸ್‌ “.!

New twist in Dharmasthala case. Woman files complaint through registered post and verbally. Complaint to Belthangady Special Investigation Team. Woman from Mandya registers case with SIT police Complaint filed at SIT helpline at 4 pm on August 1. SIT police conducted a lengthy interrogation for 45 minutes. Police got explanation about the case over the phone. Woman also called Women's Commission and informed. Complaint filed today through registered post.

ಮೈಸೂರು, ಆ.೨೯,೨೦೨೫: ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು.  ರಿಜಿಸ್ಟರ್ಡ್ ಪೋಸ್ಟ್ ಹಾಗು ಮೌಖಿಕವಾಗಿ ದೂರು ದಾಖಲಿಸಿದ ಮಹಿಳೆ. ಬೆಳ್ತಂಗಡಿ ವಿಶೇಷ ತನಿಖಾ ದಳಕ್ಕೆ ದೂರು. ಎಸ್ ಐಟಿ ಪೊಲೀಸರಿಗೆ ಕೇಸ್ ರಿಜಿಸ್ಟರ್ ಮಾಡಿದ ಮಂಡ್ಯ ಮೂಲದ ಮಹಿಳೆ

ಆಗಸ್ಟ್ 1 ರ ಸಂಜೆ 4 ಗಂಟೆ ವೇಳೆ ಎಸ್ ಐಟಿ ಸಹಾಯವಾಣಿಗೆ ದೂರು ಸಲ್ಲಿಕೆ. 45 ನಿಮಿಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿರುವ ಎಸ್ ಐಟಿ ಪೊಲೀಸರು. ದೂರವಾಣಿ ಮೂಲಕವೇ ಪ್ರಕರಣ ಕುರಿತು ವಿವರಣೆ ಪಡೆದಿಕೊಂಡಿರುವ ಪೊಲೀಸರು. ಮಹಿಳಾ ಆಯೋಗಕ್ಕೂ ಕರೆ ಮಾಡಿ‌ ಮಾಹಿತಿ ನೀಡಿರುವ ಮಹಿಳೆ. ಈವತ್ತು ರಿಜಿಸ್ಟರ್ಡ್ ಪೋಸ್ಟ್ ಮೂಲಕ ದೂರು ಸಲ್ಲಿಕೆ.

ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೃದ್ಧೆ. ಎಸ್ ಐಟಿ ವಿಚಾರಣೆಗೆ ಕರೆದಾಗ ತೆರಳಲು ಸನ್ನದ್ಧ. ಬಾಲಕಿ ಸಾವಿಗೆ ಪ್ರತ್ಯಕ್ಷ ಸಾಕ್ಷಿ ನಾನೇ ಎನ್ನುತ್ತಿರುವ ವೃದ್ಧೆ. ಈ ಸಂಬಂದ ಮೈಸೂರಿನ “ನ್ಯೂಸ್‌ ಫಸ್ಟ್‌ “ ಸುದ್ದಿ ವಾಹಿನಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ…

ಧರ್ಮಸ್ಥಳ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ನೀಡಲಿರುವ ಮಂಡ್ಯ ಮಹಿಳೆ, ನಾನು ಒಂದು‌ ಹುಡುಗಿಯನ್ನ ಕಿಡ್ನಾಪ್ ಮಾಡಿದ್ದನ್ನ ಕಣ್ಣಾರೆ ಕಂಡೆ. ಚರ್ಮವ್ಯಾಧಿ ಕಾಯಿಲೆ ಚಿಕಿತ್ಸೆಗೆ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದೆ. ಆ ವೇಳೆ ಆಕೆಯನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದನ್ನ ನಾನು ಕಣ್ಣಾರೆ ನೋಡಿದ್ದೇನೆ. ನಾನು ಆಕೆಯ ಮುಖ ಮರೆಯಲು ಸಾಧ್ಯವೇ ಇಲ್ಲ. ನಮ್ಮನ್ನ ಆ ಸ್ಥಳದಿಂದ ಹೋಗುವಂತೆ ಬಲವಂತ ಮಾಡಿದ್ರು. ದುಡ್ಡು ಬೇಡ ಬನ್ನಿ ಆಟೋದಲ್ಲೇ ಬಿಡ್ತೀನಿ ಅಂದ್ರು. ನಾವು ಭಯದಿಂದ ಅವರ ಜೊತೆ ಹೋಗಲಿಲ್ಲ.

ಆ ಹುಡುಗಿ ಕಿಡ್ನಾಪ್ ದಿನವನ್ನ ಮರೆಯಲು ಸಾಧ್ಯವಿಲ್ಲ. ಆವತ್ತು ನನ್ನ ತಂದೆಯವರ ಜನ್ಮದಿನ. ಆ ಕಾರಣಕ್ಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲು ತೆರಳಿದ್ದೆ. ಪೂಜೆ ಸಲ್ಲಿಸಿ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದಾಗ ನಡೆದಿದ್ದ ಘಟನೆ ಅದು. ಘಟನೆ ನಡೆದು ಬಂದ ಬಳಿಕ ನಾಲೈದು ದಿನ ಚಡಪಡಿಸಿದ್ದೆ. ಆಮೇಲೆ ಎಂದಿನಂತೆ ನಾನು ಕೆಲಸ ಮಾಡಿಕೊಂಡಿದ್ದೆ. ಕಳೆದ ಎರಡು ವರ್ಷದ ಹಿಂದೆ ಮೊಬೈಲ್ ನಲ್ಲಿ ನಾನು ನೋಡಿದೆ. ಖಾಸಗಿ ಚಾನೆಲ್ ಒಂದರ ಇಂಟರ್ ವ್ಯೂವ್ ನಲ್ಲಿ ನಾನು ಧರ್ಮಸ್ಥಳದಲ್ಲಿ ನೋಡಿದವರನ್ನ ಕಂಡೆ. ಆವಾಗ ಆ ಎಲ್ಲಾ ಘಟನಾವಳಿ ನೆನಪಿಗೆ ಬಂದವು. ತಕ್ಷಣ ನಾನು ಒಡನಾಡಿ ಸಂಸ್ಥೆಯನ್ನ ಸಂಪರ್ಕಿಸಿದೆ. ಆದರೆ, ಒಡನಾಡಿಯವರು ನನ್ನ‌ಮಾತನ್ನ ನಂಬಲಿಲ್ಲ. ಬಳಿಕ‌ ನಾನೇ ಹಲವು ಬಾರಿ ಒಡನಾಡಿ ಸಂಪರ್ಕಿಸಿದೆ. ಕೊನೆಗೆ ಅವರು ನನ್ನ ಪರ ನಿಲ್ಲಲು‌ ಮುಂದಾಗಿದ್ದಾರೆ.

ನಾನು ಹೇಳುತ್ತಿರುವುದೆಲ್ಲವೂ ಸತ್ಯ. ನನ್ನ ಮನೆ ದೇವರು ವೈದ್ಯನಾಥೇಶ್ವರನ ಮೇಲಾಣೆ. ನಾನು ಎಲ್ಲ ತನಿಖೆ ಎದುರಿಸಲು ಸಿದ್ಧನಿದ್ದೇನೆ. ಕಂಡು ಕಂಡು  ಯಾರೂ ಕೊಂಡದಲ್ಲಿ ಬೀಳಲ್ಲ. ನಾನು ಅಜ್ಞಾನದ ದಾರಿಯಲ್ಲಿ ನಡೆದು ಬಂದಿಲ್ಲ. ನಾನು ಬೇರೆಯವರ ರೀತಿ ಮೂಢರಂತೆ ವರ್ತಿಸಲ್ಲ. ನನಗೆ ಧರ್ಮಸ್ಥಳ ಪ್ರಾಂತ್ಯದವರು ಗೊತ್ತಿಲ್ಲ. ನನಗೆ ಈ ಪ್ರಕರಣದಿಂದ ಏನೂ ಆಗಬೇಕಿಲ್ಲ. ನನಗೆ ಯಾವುದೇ ಹಣ,ಆಸ್ತಿ ಯಾವುದರ ಆಮೀಷವಿಲ್ಲ. ನಾನು ನೋಡಿರುವ ಸತ್ಯವನ್ನ ಹೇಳಲೇಬೇಕು ಅಂತ ಮುಂದೆ ಬಂದಿರುವೆ.

ಸುಜಾತಾಭಟ್, ಚಿನ್ನಯ್ಯ ವಿರುದ್ಧ ಮಹಿಳೆ ಕಿಡಿ. ನನ್ನನ್ನ ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಲಿ. ನಾನು ಸುಳ್ಳು ಹೇಳುತ್ತಿದ್ದರೆ ನನ್ನನ್ನ ಶೂಟ್ ಮಾಡಲಿ. ನಾನು ರೇಪ್ ಆಯ್ತು, ಕೊಲೆ ನೋಡಿದೆ ಅಂತಿಲ್ಲ. ನಾನು ಆಕೆಯನ್ನ ಹೊತ್ಕೊಂಡು‌ ಹೋಗಿದ್ದನ್ನ ನೋಡಿದ್ದೇನೆ. ಇದು ನನ್ನ ಇಬ್ಬರು ಹೆಣ್ಣು ಮಕ್ಕಳ‌ ಮೇಲಾಣೆ. ನಾನು ಹೇಳಿದವರನ್ನೂ ತನಿಖೆಗೆ ಒಳಪಡಿಸಿ. ಡಿಕೆಶಿ, ಹೋಂ ಮಿನಿಸ್ಟರ್ ವಿರುದ್ಧವೂ ಕಿಡಿ. ಧರ್ಮಸ್ಥಳದ ಕಪ್ಪು ಚುಕ್ಕೆ ಹೋಗಲಾಡಿಸಲು ಈ ಎಸ್ ಐಟಿ ಅಂತಾರೆ. ಈ ಚಿನ್ನಯ್ಯನನ್ನ ಅವರೇ ಅಂದ್ರೆ ಧರ್ಮಸ್ಥಳದವರೇ ಕಳುಹಿಸರಬಹುದಲ್ಲವೇ? ಪ್ರಕರಣಕ್ಕೆ ಕ್ಲೀನ್ ಚಿಟ್ ಕೊಡಲು‌ ಮುಂದಾಗಿರಬಹುದಲ್ಲವೇ?

ಚಿನ್ನಯ್ಯ ತಂದ ಬುರುಡೆ ಎಲ್ಲಿಯದು ಅಂತ ಮೊದಲೇ‌ ತನಿಖೆ ಮಾಡಬೇಕಿತ್ತು? ತಿಮರೋಡಿ‌ ಮನೆಯಲ್ಲಿ ಈ ಚಿನ್ನಯ್ಯ ಏಕೆ ಇದ್ದ? ಆ ಹುಡುಗಿ ಯಾರು ಅಂತಾನೇ ಗೊತ್ತಿರಲಿಲ್ಲ. ಮೊಬೈಲ್‌ನಲ್ಲಿ‌ಇಂಟರ್ ವ್ಯೂವ್ ಗಳನ್ನ ನೋಡಿದ ಮೇಲೆ ತಿಳಿಯಿತು. ಆ ತೊದಲಿನವನನ್ನ ನೋಡಿದವನ್ನ  ನಾನು ಕಪಾಳಕ್ಕೆ ಹೊಡಿತೀನಿ. ಎಸ್ ಐಟಿ ಪಾರದರ್ಶನ ತನಿಖೆ ನಡೆಸಬೇಕು. ನಾನು ಹುಚ್ಚಿ ಅಲ್ಲ, ಬುರುಡೆ ಬಿಡ್ತಿಲ್ಲ. ಆ ಸುಜಾತಾ ಭಟ್ ಗೆ ಅಷ್ಟೊಂದು ವಯಸ್ಸಾಗಿದೆ. ಆಕೆ ದುರುದ್ದೇಶ ಇಟ್ಕೊಂಡು‌ ಬಂದು ದಿಕ್ಕು ತಪ್ಪಿಸ್ತಿದ್ದಾಳೆ. ಚಿನ್ನಯ್ಯ ಹೇಳಿಕೆಗಳ ಮೇಲೂ ನನಗೆ ಅನುಮಾನವಿದೆ ನಾನು ಸತ್ಯ ಹೇಳಿ ಸಾಯಲು ಸಿದ್ಧ. ನನಗೆ ಗುಂಡು ಹಾರಿಸಿದರೂ ನಾನು ರೆಡಿ. ನಾನು ಯಾವುದೇ ಹಂತದಲ್ಲೂ  ಸುಳ್ಳು ಹೇಳ್ತಿಲ್ಲ. ಜಗತ್ತಿನ ಯಾವುದೇ ತನಿಖೆ ಎದುರಿಸಲು ಸನ್ನದ್ಧ.

ಕೃಪೆ: ನ್ಯೂಸ್ ಫಸ್ಟ್‌

key words: Dharmasthala case, Women appears, before SIT, “eyewitness”, Girl kidnapping!

vtu

SUMMARY:

Dharmasthala case: Women appears before SIT as “eyewitness” of Girl kidnapping!

New twist in Dharmasthala case. Woman files complaint through registered post and verbally. Complaint to Belthangady Special Investigation Team. Woman from Mandya registers case with SIT police

Complaint filed at SIT helpline at 4 pm on August 1. SIT police conducted a lengthy interrogation for 45 minutes. Police got explanation about the case over the phone. Woman also called Women’s Commission and informed. Complaint filed today through registered post.