ಬೆಂಗಳೂರು,ಆಗಸ್ಟ್,28,2025 (www.justkannada.in) : ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನುಮುಷ್ತಾಕ್ ಅವರ ಆಯ್ಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆರ್.ಅಶೋಕ್ , ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? 6 ಕೋಟಿ ಹಿಂದೂಗಳಲ್ಲಿ 3 ಕೋಟಿ ಮಹಿಳೆಯರಿದ್ದಾರೆ. ಹಿಂದೂ ಮಹುಳೆಯರಲ್ಲಿ ಒಬ್ಬ ಸಾಹಿತಿಯೂ ಸಿಕ್ಕಿಲಿಲ್ಲವೇ..? ಎಂದು ಸರ್ಕಾರದ ನಡೆ ಟೀಕಿಸಿದ್ದಾರೆ.
ಕನ್ನಡವನ್ನ ನಾವು ಭುವನೇಶ್ವರಿ ಮಾಡಿದ್ದೆವು ಎಂದು ಹೇಳಿದ್ದಾರೆ. ಅದಕ್ಕೆ ಅರಿಶಿಣ ಕುಂಕುಮ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇನ್ನೇನು ಸೆಂಟ್ ಹೊಡೆಯೋಕೆ ಆಗುತ್ತಾ? ಅರಿಶಿಣ ಕುಂಕುಂಮ ಖಂಡಿಸಿದವರು ಪೂಜೆ ಮಾಡುತ್ತಾರೆಂತೆ ಅದೇ ಅರಿಶಿಣ ಕುಂಕುಮವನ್ನಿಟ್ಟು ಪೂಜೆ ಮಾಡಬೇಕು ಮಸೀದಿಗೆ ಇವರನ್ನ ಒಳಗಡೆ ಕರೆಯಲ್ಲ. ಇನ್ನ ಚಾಮುಂಡಿ ತಾಯಿ ಹೇಗೆ ಕರೆಯುತ್ತಾರೆ ಎಂದು ಪ್ರಶ್ನಿಸಿದರು.
ನಿನಗೆ ನಿತ್ಯೋತ್ಸವ ಅಂತಾ ಪದ್ಯ ಬರೆದವರು ನಿಸಾರ್ ಅಹ್ಮದ್. ನಿಸಾರ್ ಅಹ್ಮದ್ ಯಾವುದೇ ಧರ್ಮದ ಬಗ್ಗೆ ಮಾತನಾಡಲಿಲ್ಲ. ನಿಸಾರ್ ಅಹ್ಮದ್ ರಿಗೂ ಬಾನು ಮುಷ್ತಾಕ್ ಗೂ ಹೋಲಿಕೆ ಮಾಡಬೇಡಿ ಸಿದ್ದರಾಮಯ್ಯ ಅಲ್ಪಸಂಖ್ಯಾತ ಸಿಎಂ ಆಗಿದ್ದಾರಾ? ದಸರಾ ಉದ್ಘಾಟಿಸೋಕೆ ಕುರುಬ, ಒಕ್ಕಲಿಗ ಹಿಂದುಳಿದ ವರ್ಗದವರು ಸಿಗಲಿಲ್ವಾ? ಅಪರೇಷನ್ ಸಿಂಧೂರ ಸೈನಿಕರನ್ನ ಕರೆಸಿ ದಸರಾ ಉದ್ಘಾಟಿಸಿ ಎಂದು ಆರ್ .ಅಶೋಕ್ ಆಗ್ರಹಿಸಿದರು.
Key words: R. Ashok ,opposes ,inauguration, Dasara, Banu Mushtaq