ಸರ್ಕಾರದ ನಡೆಯಿಂದ ಧರ್ಮಸ್ಥಳಕ್ಕೆ ಅಪಮಾನ: ಮಂಜುನಾಥನೇ ಶಿಕ್ಷೆ ಕೊಡ್ತಾನೆ- ಕೇಂದ್ರ ಸಚಿವ ಹೆಚ್.ಡಿಕೆ

ಬೆಂಗಳೂರು,ಆಗಸ್ಟ್,28,2025 (www.justkannada.in):  ಸರಕಾರದ ನಡೆಯಿಂದ ಧರ್ಮಸ್ಥಳಕ್ಕೆ ಅಪಮಾನವಾಗಿದೆ. ಮಂಜುನಾಥಸ್ವಾಮಿಯೇ ಸರ್ಕಾರಕ್ಕೆ ಶಿಕ್ಷೆ ಕೊಡುತ್ತಾನೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ನಡವಳಿಕೆ ಬೇಸರ ತರಿಸಿದೆ.  ಈ ಕೇಸ್ ನಲ್ಲಿ ನಾನು ಧರ್ಮ ಬೆರೆಸಲು ಹೋಗಲ್ಲ ಎಸ್ ಐಟಿ ಹೆಸರಲ್ಲಿ ತನಿಖೆಯ ನಾಟಕ ಮಾಡುತ್ತಿದ್ದಾರೆ. ಸರ್ಕಾರದ ನಡೆಯಿಂದ ಧರ್ಮಸ್ಥಳಕ್ಕೆ ಅಪಮಾನವಾಗಿದೆ.

ಸರ್ಕಾರ ಎಡಪಂಥಿಯರ ಒತ್ತಡಕ್ಕೆ ಮಣಿದಿದೆ.  ಮಂಜುನಾಥಸ್ವಾಮಿ ಸರ್ಕಾರಕ್ಕೆ ಶಿಕ್ಷೆ ಕೊಡುತ್ತಾನೆ ಎಂದು ಹೆಚ್ ಡಿಕೆ ಹೇಳಿದರು.

Key words: Government, Dharmasthala, Union Minister, HDK