ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ: ಯಾವುದೇ ಅನುಮಾನವಿಲ್ಲ- ಡಿಕೆಶಿ ಹೇಳಿಕೆಗೆ ಸಂಸದ ಯದುವೀರ್ ಟಾಂಗ್

ಮೈಸೂರು, ಆಗಸ್ಟ್,28,2025 (www.justkannada.in): ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ, ಎಲ್ಲಾ ಧರ್ಮದವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಯದುವೀರ್,  ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ. ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಆಗಿದೆ ಇವತ್ತಿಗೂ ಅದು ಹಿಂದೂಗಳ ಆಸ್ತಿ, ಅನುಮಾನವಿಲ್ಲ.  ಡಿಕೆ ಶಿವಕುಮಾರ್ ಹೇಳಿಕೆಯಿಂದ ಯಾವುದೇ ಬದಲಾವಣೆ ಇಲ್ಲ ಎಂದರು.

ಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಂಸದ ಯದುವೀರ್, ಚಾಮುಂಡಿ ಬೆಟ್ಟ ದೇಗುಲವನ್ನ ನಿಯಂತ್ರಣ ಮಾಡೋದು ಸರಿಯಲ್ಲ ಸರ್ಕಾರದಿಂದ ದಾರ್ಮಿಕ ಸ್ಥಳ ನಿಯಂತ್ರಣ ಸರಿಯಲ್ಲ ನಿಯಂತ್ರಣಕ್ಕೆ ತೆಗೆದುಕೊಂಡರೆ ಸಮಸ್ಯೆ ಆಗುತ್ತದೆ ಎಂದು ಹೇಳಿದರು.

Key words: Chamundi Hills, Hindus, property, MP Yaduveer