ರಾಷ್ಟ್ರಪತಿ ಮುರ್ಮು ಭೇಟಿ: ಚಾಮುಂಡಿಬೆಟ್ಟ, ಅರಮನೆಗೆ ಕೆಲಕಾಲ ಸಾರ್ವಜನಿಕರ ಪ್ರವೇಶ ನಿರ್ಬಂಧ.

In view of the arrival of the President on September 1, public entry has been banned at AIISH. In addition, all medical services have been suspended, and the institution has been declared a holiday. In view of the visit to Chamundi Hills in the evening, public entry to the hills has been restricted from 6 pm to 8.30 pm that day.

vtu

 ಮೈಸೂರು, ಆ.೨೭,೨೦೨೫: ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ( All India Institute of Speech and Hearing -AIISH) 60ನೇ ವಾರ್ಷಿಕೋತ್ಸವ (Diamond Jubilee) ಕಾರ್ಯಕ್ರಮ ಉದ್ಘಾಟನೆಗೆ ಸೆ.೧ ರಂದು ಮೈಸೂರಿಗೆ ಆಗಮಿಸುವ ರಾಷ್ಟ್ರಪತಿ ದ್ರೌಪದಿ ಮುರ್ಮು.

ಅಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ. ಬಳಿಕ ಮಾನಸ ಗಂಗೋತ್ರಿಯ ಆಯಿಷ್‌ ಕ್ಯಾಂಪಸ್‌ ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಭಾಗಿ. ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆಯಲಿರುವ ರಾಷ್ಟ್ರಪತಿ. ಬಳಿಕ ರ್ಯಾಡಿಸನ್‌  ಬ್ಲೂ ಹೋಟೆಲ್‌ ನಲ್ಲಿ ರಾತ್ರಿ ವಾಸ್ತವ್ಯ.

ಮುಂಜಾನೆ ೮.೫೦ ಕ್ಕೆ ಮೈಸೂರು ಅರಮನೆಗೆ ತೆರಳಿ ರಾಜವಂಶಸ್ಥೆ ಪ್ರಮೋದಾದೇವಿ ಅವರನ್ನು ಸೌಹಾರ್ಯುತ ಭೇಟಿ. ಬೆಳಗಿನ ಉಪಹಾರ ಸೇವನೆ. ನಂತರ ಅರಮನೆಯ ಕೆಲ ಪ್ರಮುಖ ಸ್ಥಳಗಳನ್ನು ವೀಕ್ಷಿಸಲಿರುವ ರಾಷ್ಟ್ರಪತಿ ಮುರ್ಮು. ೧೦ ಗಂಟೆಗೆ ಅಲ್ಲಿಂದ ನಿರ್ಗಮನ. ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ನೇರವಾಗಿ ಚೆನ್ನೈಗೆ ಪ್ರಯಾಣಿಸಲಿರುವ ರಾಷ್ಟ್ರಪತಿ.

ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ‌ ಅವರು ಈಗಾಗಲೇ ತಾಲೀಮು ಸಭೆ ನಡೆಸಿ, ರಾಷ್ಟ್ರಪತಿ ಭಾಗವಹಿಸುವ ಕಾರ್ಯಕ್ರಮಗಳ ಸುಲಲಿತ ನಿರ್ವಹಣೆಗೆ  ಪರಿಶೀಲನೆ ನಡೆಸಿದ್ದಾರೆ.

ಮೈಸೂರು ನಗರ ಪಾಲಿಕೆ (Mysuru City Corporation), ಮೈಸೂರು ಅಭಿವೃದ್ಧಿ ಪ್ರಾಧಿಕಾರ (Mysuru Development Authority) ಮತ್ತು NHAI (National Highways Authority of India) ಅಧಿಕಾರಿಗಳ ಜತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಪೂರ್ವ ಸಿದ್ಧತಾ ಸಭೆ ನಡೆಸಿರುವ ಜಿಲ್ಲಾಧಿಕಾರಿ. ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದರು.

ನಿಷೇಧ:

ಸೆ. ೧ ರಂದು ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ AIISH–ನಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಜತೆಗೆ ಎಲ್ಲಾ ವೈದ್ಯಕೀಯ ಸೇವೆಗಳು ಸ್ಥಗಿತಗೊಳಿಸಿ, ಸಂಸ್ಥೆಗೆ  ರಜೆ ಘೋಷಿಸಲಾಗಿದೆ.

ಸಂಜೆ ವೇಳೆಗೆ ಚಾಮುಂಡಿಬೆಟ್ಟಕ್ಕೆ ತೆರಳುವ ಹಿನ್ನೆಲೆಯಲ್ಲಿ ಅಂದು ಸಂಜೆ ೬ ರಿಂದ ರಾತ್ರಿ ೮.೩೦ ರ ತನಕ ಸಾರ್ವಜನಿಕರಿಗೆ ಬೆಟ್ಟ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದೆ.

ಸೆ.2 ರಂದು  ಮೈಸೂರು ಅರಮನೆ (Mysore Palace) ರಾಷ್ಟ್ರಪತಿ ಮುರ್ಮು ಅವರು ಬೆಳಗ್ಗೆ   8.50 ಕ್ಕೆ ಆಗಮಿಸುವರು. ಈ ಹಿನ್ನೆಲೆಯಲ್ಲಿ ಸೆ.2 ರಂದು  ಬೆಳಗ್ಗೆ 11.30 ರವರೆಗೆ ಅರಮನೆ ಪ್ರವೇಶ ನಿಷೇಧ, ಮತ್ತೆ ಸೆ.1 ರಾತ್ರಿ ನಡೆಯಬೇಕಿದ್ದ “Sound and Light Show” ರದ್ದು ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

key words: President Murmu’s, Mysore visit, public access, restricted, Chamundi Hills, palace,

vtu

SUMMARY:

President Murmu’s visit: Public access to Chamundi Hills and the palace restricted for some time.

In view of the arrival of the President on September 1, public entry has been banned at AIISH. In addition, all medical services have been suspended, and the institution has been declared a holiday. In view of the visit to Chamundi Hills in the evening, public entry to the hills has been restricted from 6 pm to 8.30 pm that day.