ಮೈಸೂರು, ಆ.೨೭ : ಚಾಮುಂಡಿಬೆಟ್ಟ ಹಿಂದುಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ. ನಿಜಕ್ಕೂ ಹಾಸ್ಯಾಸ್ಪದ. ವಿನಾಯಕ, ಗೌರಿ ಹಬ್ಬ ಆಚರಿಸುವ ವೇಳೆ ಹಿಂದೂ ಭಾವನೆಗೆ ಧಕ್ಕೆ ತರುವ ವಿಚಾರ ಇದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಸದ ಯದುವೀರ್ ಹೇಳಿದಿಷ್ಟು..
ಸಾವಿರಾರು ವರ್ಷಗಳ ಹಿಂದೆ ಮರ್ಕಂಡೇಯ ತಪಸ್ಸು ಮಾಡಿದ್ದ ಸ್ಥಳ ಅದು. ಸಾವಿರಾರು ವರ್ಷಗಳಿಂದ ಚಾಮುಂಡಿ ಇರುವುದು ಕೂಡ ಉಲ್ಲೇಖ ಇದೆ . ಚಾಮುಂಡಿಬೆಟ್ಟಕ್ಕೆ ಎಲ್ಲರಿಗೂ ಪ್ರವೇಶವಿದೆ. ಅದು ಧಾರ್ಮಿಕ ಸ್ಥಳವಾಗಿರುವ ಕಾರಣ ಎಲ್ಲರೂ ಹೋಗಬಹುದು. ಆಧುನಿಕ ಕಾಲಘಟ್ಟದಲ್ಲಿ ಜಾತ್ಯಾತೀತ ದೃಷ್ಟಿಕೋನದಿಂದ ನೋಡಬಹುದು. ಲಕ್ಷಾಂತರ ಜನರ ಭಾವನೆಗೆ ಧಕ್ಕೆ ಉಂಟಾಗಿದೆ.
ಧರ್ಮ ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತೇವೆ. ಜತೆಗೆ ಕಾನೂನು ಚೌಕಟ್ಟಿನಲ್ಲೂ ಹೋರಾಡುತ್ತೇವೆ. ನಾವು ಎಲ್ಲ ಧರ್ಮ ಒಪ್ಪಿಕೊಳ್ತೀವಿ. ಹಾಗಂತ ಒಂದು ಧರ್ಮದ ಓಲೈಕೆಗೆ ಮುಂದಾಗಬಾರದು. ರಾಜ್ಯದಲ್ಲಿಹಲವು ಸಮಸ್ಯೆಗಳಿವೆ. ಅವುಗಳನ್ನ ಮುಚ್ಚಿ ಹಾಕಲು ಇಂತಹ ಹೇಳಿಕೆ ಬೇಡ. ಭವಿಷ್ಯದಲ್ಲಿ ನಿಮಗೆ ಒಳಿತು ಆಗಲ್ಲ ರಾಜವಂಶಸ್ಥ ಯದುವೀರ್ ಹೇಳಿಕೆ.
ಚಾಮುಂಡಿಬೆಟ್ಟ ಟಾರ್ಗೆಟ್ ಆಗಿದೆಯ? ಎಂಬ ಪ್ರಶ್ನೆಗೆ, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಇದೇ ಕಾಂಗ್ರೆಸ್ ಸರ್ಕಾರ. ಬೆಟ್ಟವನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅವರ ಹುನ್ನಾರ. ಬರೀ ಹಿಂದೂ ದೇವಾಲಯಗಳನ್ನ ತೆಗೆದುಕೊಳ್ತಿದ್ದಾರೆ. ಬೆಂಗಳೂರಿನ ಆಂಜನೇಯ ದೇವಸ್ಥಾನವನ್ನೂ ಹಾಗೆ ಮಾಡಿದ್ರು. ಯಾವಾಗಲೂ ಹಿಂದುಗಳಿಗೆ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೋಟ್ಯಾಂತರ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ಕಾಂಗ್ರೆಸ್ ಹಿಂದೂ ಸ್ಥಳಗಳನ್ನ ಟಾರ್ಗೆಟ್ ಮಾಡ್ತಿದೆ. ಕಾಂಗ್ರೆಸ್ ನಿಂದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆರ್ ಎಸ್ ಎಸ್ ಹಾಡು ಹಾಡಿ ಜಾಗೃತಿ ಎಂದಿದ್ದರು. ಬಳಿಕ ಸ್ವಪಕ್ಷದವರ ವಿರೋಧಕ್ಕೆ ಗುರಿಯಾದರು. ಅದನ್ನ ಸಮತೋಲನಕ್ಕೆ ತರಲು ಕ್ಷಮೆ ಯಾಚಿಸಿದರು. ಪಕ್ಷಕ್ಕಾಗಿ, ಕಾರ್ಯಕರ್ತರಿಗಾಗಿ ಇಂತಹ ಹೇಳಿಕೆ ನೀಡಿರಬಹುದು ಎಂದು ಯದುವೀರ್ ವಿಶ್ಲೇಷಿಸಿದರು.
ಈ ಹಿಂದೆ ಡ್ರಗ್ಸ್ ಪ್ರಕರಣ ಮುಚ್ಚಿ ಹಾಕಲು ಟಿಪ್ಪು ವಿಚಾರ ತಂದ್ರು. ಹಾಗೆಯೇ ಯಾವುದಾದರೂ ವಿಷಯ ಇದ್ದಾಗ ಡೈವರ್ಟ್ ಮಾಡಲು ಹೇಳಿಕೆ ನೀಡ್ತಾರೆ. ದೇವಾಲಯಗಳನ್ನ ನಿಯಂತ್ರಣಕ್ಕೆ ತರುತ್ತಿದಾರೆ. ಪ್ರಥಮವಾಗಿ ಇದೊಂದು ಧಾರ್ಮಿಕ ಸ್ಥಳ. ಬೆಟ್ಟ ಹಿಂದುಗಳ ಆಸ್ತಿ. ಅದು ಎಂದೆಂದಿಗೂ ಹಿಂದುಗಳ ಆಸ್ತಿ ಆಗಿರುತ್ತೆ. ಉಪಮುಖ್ಯಮಂತ್ರಿ ಹೇಳಿಕೆಯಿಂದ ಏನೂ ಆಗಲ್ಲ.
ಮಾಜಿ ಸಂಸದ ಹೇಳಿಕೆ:
ಮೈಸೂರು-ಕೊಡಗು ಸಂಸದ ಯದುವೀರ್ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಶಿವನ ಕಪಾಲಿ ಬೆಟ್ಟವನ್ನೆ ಏಸು ಬೆಟ್ಟ ಮಾಡಲು ಹೊರಟ ಡಿಕೆ ಶಿವಕುಮಾರ್ ರಿಂದ ನಮಗೆ ಧರ್ಮ ದ ಪಾಠ ಬೇಡ. ಅನ್ಯ ಧರ್ಮದವರನ್ನು ಬರೀ ಓಲೈಕೆಗಾಗಿ ಬ್ರದರ್ಸ್ ಎಂದು ಕರೆಯುವ ಡಿಕೆ ಶಿವಕುಮಾರ್ ನಮಗೆ ಧರ್ಮ ದ ಬಗ್ಗೆ ತಿಳುವಳಿಕೆ ಹೇಳುವುದು ಬೇಡ ಎಂದಿದ್ದಾರೆ.
key words: Chamundi Hill, property of Hindus, political purposes, not benefit you,Yaduveer.
SUMMARY:
Chamundi Hills is not the property of Hindus: Such statements are not appropriate for political purposes, they will not benefit you in the future – Yaduveer.
We will fight to save religion. We will also fight within the legal framework. We accept all religions. We should not try to appease one religion like that. There are many problems in the state. We do not need such statements to cover them up. In the future, you will not understand the statement of the royal family Yaduveer.