ರಾಷ್ಟ್ರಪತಿ ಆಗಮನ ಹಿನ್ನೆಲೆ: ಸೆ.1 ರಂದು ಮೈಸೂರಿನ ಐಷ್(AIISH) ನಲ್ಲಿ ಚಿಕಿತ್ಸಾ ಸೇವೆಗಳು ಅಲಭ್ಯ

ಮೈಸೂರು,ಆಗಸ್ಟ್,26,2025 (www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸೆಪ್ಟಂಬರ್ 1 ರಂದು ನಡೆಯಲಿರುವ 60ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಲಿದ್ದಾರೆ.

ಸೆಪ್ಟಂಬರ್ 1 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಲಿರುವ ಹಿನ್ನೆಲೆಯಲ್ಲಿ ಅಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಯಾವುದೇ ಚಿಕಿತ್ಸಾ ಸೇವೆಗಳು ಲಭ್ಯವಿರುವುದಿಲ್ಲ. ಜೊತೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಅಂದು ಸಂಸ್ಥೆಯ ಎಲ್ಲಾ ವಿಭಾಗಗಳಿಗೂ ರಜೆ ಘೋಷಿಸಲಾಗಿದ್ದು ಚಿಕಿತ್ಸಾ ಸೇವೆ ಅಲಭ್ಯವಾಗುವ ಕಾರಣ ಸಾರ್ವಜನಿಕರು ಅಂದು ಸಂಸ್ಥೆಗೆ ಭೇಟಿ ನೀಡದಂತೆ ಸಂಸ್ಥೆಯ ನಿರ್ದೇಶಕರಾದ ಡಾ.ಎಂ.ಪುಷ್ಪಾವತಿ ಅವರು ಕೋರಿದ್ದಾರೆ.

key words: President , Mysore, AIISH,  September 1,Medical services, unavailable