ಬೆಂಗಳೂರು,ಆಗಸ್ಟ್,26,2025 (www.justkannada.in): ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ್ದಾರೆ.
ಸದನದಲ್ಲಿ ಆರ್ ಎಸ್ ಎಸ್ ಗೀತೆ ಕ್ಷಮೆ ಕೇಳಲು ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದರು. ಇದೀಗ ಕ್ಷಮೆ ಕೇಳಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ತಪ್ಪು ಮಾಡಿದ್ದೀನಿ ಅಂದರೆ ಕ್ಷಮೆ ಕೇಳುತ್ತೇನೆ ಯಾರ ಮನಸ್ಸು ನೋಯಿಸೋದಕ್ಕೆ ನನಗೆ ಇಷ್ಟವಿಲ್ಲ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ರಿಗೆ ಕ್ಷಮೆ ಕೇಳುತ್ತೇನೆ. ಹಿರಿಯ ನಾಯಕರು ಹಲವು ಸಲಹೆ ನೀಡಿದ್ದಾರೆ. ನಾನು ಅವರ್ಯಾರಿಗಿಂತಲೂ ದೊಡ್ಡವರಲ್ಲ ಎಲ್ಲರ ಕಷ್ಟ ಕಾಲದಲ್ಲಿ ನಿಲ್ಲೂದು ನನ್ನ ಕೆಲಸ ಎಂದಿದ್ದಾರೆ.
ಇದೇ ವೇಳೆ ಬಿಕೆ ಹರಿಪ್ರಸಾದ್ ಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್, ನನಗೆ ಯಾರಿಂದಲೂ ಪಾಠದ ಅಗತ್ಯವಿಲ್ಲ. ನನ್ನ ಬದ್ದತೆಯನ್ನ ಅವಮಾನಿಸಿದ್ರೆ ಅವರಷ್ಟು ಮೂರ್ಖರು ಯಾರಿಲ್ಲ. ಯಾರೂ ನನ್ನನ್ನು ಮ್ಯಾಚ್ ಮಾಡಲು ಆಗಲ್ಲ ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಕಾಂಗ್ರೆಸ್ ನಲ್ಲಿ ಹುಟ್ಟಿರುವೆ. ಕಾಂಗ್ರೆಸ್ ನಲ್ಲೇ ಸಾಯುವೆ. ಕ್ಷಮೆ ಕೇಳಿ ಅಂದ್ರೆ ಕೇಳಲು ನಾನು ಸಿದ್ದ. ಹರಿಪ್ರಸಾದ್ ಗೂ ಕ್ಷಮೆ ಕೇಳೋಣ ಬಿಡಿ ಎಂದು ಟಾಂಗ್ ನೀಡಿದರು.
Key words: DCM, DK Shivakumar, apologizing , singing ,RSS , Song