ಹಿರಿಯ ವರದಿಗಾರರಿಗೆ ‘ಸೌತ್ ಇಂಡಿಯಾ ಮಿಡಿಯಾ ಅವಾರ್ಡ್’ ಗೌರವ: ಮೈಜಿಪಸಂ ಅಭಿನಂದನೆ.

ಮೈಸೂರು,ಆಗಸ್ಟ್,25,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನಗರ ಉಪಾಧ್ಯಕ್ಷ ಮತ್ತು ನ್ಯೂಸ್ ಫ್ರಸ್ಟ್  ವರದಿಗಾರ  ರವಿಪಾಂಡವಪುರ ಹಾಗೂ  ಹಿರಿಯ ವರದಿಗಾರ ಟಿವಿ-9 ರಾಮ್  ಅವರಿಗೆ ಅತ್ಯುತ್ತಮ ವರದಿಗಾರ ಮತ್ತು ವರದಿಗಾರಿಕೆಗೆ  ಪ್ರಶಸ್ತಿ ಲಭಿಸಿದ್ದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸಿದೆ.

ಬೆಂಗಳೂರಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್ ನಲ್ಲಿ ಶನಿವಾರ ಸಂಜೆ ನಡೆದ ವರ್ಷರಂಜಿತ ಕಾರ್ಯಕ್ರಮ  ಹಿರಿಯ ವರದಿಗಾರರಾದ ರವಿಪಾಂಡವಪುರ ಮತ್ತು ರಾಮ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

TNIT – ದಿ ನ್ಯೂ ಇಂಡಿಯನ್ ಟೈಮ್ಸ್ ಕಳೆದ 8 ವರ್ಷದಿಂದ ಮಾಧ್ಯಮದ ವಿವಿಧ ಗಣ್ಯರನ್ನ ಸನ್ಮಾನಿಸುತ್ತಿದೆ. ಕನ್ನಡ, ತಮಿಳು, ತೆಲಗು, ಮಲಯಾಲಂ ಭಾಷೆಗಳ ಪ್ರತಿಷ್ಠಿತ ಸೌತ್ ಇಂಡಿಯಾ ಮಿಡಿಯಾ ಅವಾರ್ಡ್ ನಾಲ್ಕು ರಾಜ್ಯಗಳ 40 ಕ್ಕೂ ಹೆಚ್ಚು ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಬೆಸ್ಟ್ ಆಂಕರ್, ಬೆಸ್ಟ್ ರಿಪೋರ್ಟರ್ಸ್, ಬೆಸ್ಟ್ ವಿಡಿಯೋ ಎಡಿಟರ್, ಬೆಸ್ಟ್ ಕ್ಯಾಮೆರಾಮೆನ್ಸ್, ಬೆಸ್ಟ್ ವಾಯ್ಸ್ ಓವರ್, ಬೆಸ್ಟ್ ಆರ್ ಓಕೆ ರಿಪೋರ್ಟರ್ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ನೀಡುವ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ.

ಈ ಬಾರಿ ಬೆಸ್ಟ್ ROK ( Rest Of Karnataka) ಮೈಸೂರು ಜಿಲ್ಲೆಯ ಹಿರಿಯ ವರದಿಗಾರರಾದ ನ್ಯೂಸ್ ಫಸ್ಟ್ ಸಂಸ್ಥೆಯ ರವಿ ಪಾಂಡವಪುರ  ಮತ್ತು ಟಿ.ವಿ-9 ರಾಮ್ ಅವರ ಮುಡಿಗೇರಿದೆ. ಬೆಂಗಳೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳ ಪೈಕಿ ಕೊಡಮಾಡುವ ಉತ್ತಮ ವರದಿಗಾರ‌ ಮತ್ತು ದೃಶ್ಯಕ್ಕೆ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಶೃಂಗಾರ ಪ್ಯಾಲೇಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ‌ ನೀಡಿ ಗೌರವಿಸಿರುವುದನ್ನು  ಮೈಸೂರು  ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಹೃದಯಪೂರ್ವಕವಾಗಿ ಅಭಿನಂದಿಸುತ್ತೇವೆ ಎಂದು ಸಂಘದ ಅಧ್ಯಕ್ಷ ದೀಪಕ್ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ತಿಳಿಸಿದ್ದಾರೆ.

Key words: Mysore, Senior reporters, honored , South India Media Award, MDJA