ಬೆಂಗಳೂರು,ಆಗಸ್ಟ್,25,2025 (www.justkannada.in): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ರಚನೆ ಮಾಡಿದ್ದ ರಾಜ್ಯ ಸರ್ಕಾರದ ವಿರುದ್ದ ಸಂಸದ ತೇಜಸ್ವಿಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ತೇಜಸ್ವಿಸೂರ್ಯ, ಯೂಟ್ಯೂಬರ್ ಸಮೀರ್ ಪರ ದೊಡ್ಡ ಲಾಯರ್ ಬರ್ತಾರೆ. ಲಾಯರ್ ಗಳ ಸಂಭಾವನೆಯೇ 5 ಲಕ್ಷ ರೂ ಇದೆ . ಸಮೀರ್ ಗೆ ಸಿಎಂ ಸಿದ್ದರಾಮಯ್ಯ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ ಐಟಿ ತನಿಖೆ ವಿಚಾರ ಕುರಿತು ಪ್ರತಿಕ್ರಿಯಿಸಿ ಸರ್ಕಾರದ ವಿರುದ್ದ ಗರಂ ಆದ ತೇಜಸ್ವಿ ಸೂರ್ಯ, ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಧಿಕಾರಿಗಳೂ ಎಸ್ ಐಟಿ ರಚನೆ ಬೇಡ ಎಂದಿದ್ದರು. ಆದರೂ ಸಿದ್ದರಾಮಯ್ಯ ಎಸ್ ಐಟಿ ರಚನೆ ಮಾಡಿದ್ದಾರೆ. ಯಾರ ಒತ್ತಡದ ಮೇರೆಗೆ ಎಸ್ ಐಟಿ ರಚನೆ ಮಾಡಿದ್ದಾರೆ. ದೆಹಲಿ ನಾಯಕರ ಒತ್ತಡದ ಮೇರೆಗೆ ಎಸ್ ಐಟಿ ರಚನೆ ಮಾಡಿದ್ದಾರೆ. ಹಾಗಾದರೆ ಆ ನಾಯಕರು ಯಾರು ಎಸ್ ಐಟಿ ರಚನೆ ಬಗ್ಗೆ ಸಿಎಂ ಮಾತನಾಡಲಿ. ಧರ್ಮಸ್ಥಳ ಕೇಸ್ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
Key words: CM, supporting, Sameer, MP, Tejaswi Surya