ಚಿತ್ರದುರ್ಗ,ಆಗಸ್ಟ್,23,2025 (www.justkannada.in): ಇಡಿಯಿಂದ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ನಾಯಕರ ಮನೆ ಮೇಲೆ ಏಕೆ ಇಡಿ ದಾಳಿ ನಡೆಸಲ್ಲ. ಕಾಂಗ್ರೆಸ್ ಶಾಸಕರ ಮನೆ ಮೇಲೆಯೇ ಏಕೆಇಡಿ ದಾಳಿ ಆಗುತ್ತೆ ಬಿಜೆಪಿಯವರು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಕೆಸಿ ವೀರೇಂದ್ರ ಓರ್ವ ವ್ಯಾಪಾರಸ್ಥ ಶಾಸಕ ವೀರೇಂದ್ರರಿಗೆ ಹೆದರಿಸುವ ಕೆಲಸ ನಡೆದಿದೆ. ಹೆದರಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆದಿದೆ. ಇಂತಹ ಬೆದರಿಕೆಗಳಿಗೆ ಕಾಂಗ್ರೆಸ್ಸಿಗರು ಹೆದರುವುದಿಲ್ಲ ಕೇಂದ್ರ ಸರ್ಕಾರ ಇಡಿ ಸಿಬಿಐ ಅನ್ನು ಕೈಗೊಂಬೆಯಾಗಿಸಿಕೊಂಡಿದೆ ಎಂದು ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.
Key words: Threatening, ED, Congress, Minister, Shivraj Thangadagi