ಮಹೇಶ್ ತಿಮರೋಡಿಗೆ ಷರತ್ತು ಬದ್ಧ ಜಾಮೀನು ಮಂಜೂರು

ಉಡುಪಿ,ಆಗಸ್ಟ್,23,2025 (www.justkannada.in):  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ  ಮಹೇಶ್ ತಿಮರೋಡಿಗೆ ಷರತ್ತುಬದ‍್ಧ ಜಾಮೀನು ಮಂಜೂರಾಗಿದೆ.

ಉಡುಪಿ ಜಿಲ್ಲಾಕೋರ್ಟ್  ಮಹೇಶ್ ತಿಮರೋಡಿ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮೊನ್ನೆ ಉಜಿರೆ ನಿವಾಸದಲ್ಲಿ ಮಹೇಶಗ ತಿಮರೋಡಿ ಅವರನ್ನ  ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದರು.

ಇದೀಗ ಜಾಮೀನು ಮಂಜೂರು ಮಾಡಿರುವ ನ್ಯಾಯಾಧೀಶ ನಾಗೇಶ್ ಮುಂದೆ ಈ ರೀತಿ ನ್ಯೂಸೆನ್ಸ್ ಮಾಡದಂತೆ ಮಹೇಶ್ ತಿಮರೋಡಿಗೆ ಎಚ್ಚರಿಕೆ ನೀಡಿದ್ದಾರೆ.

Key words: Mahesh Timarodi, granted, conditional bail