ಧರ್ಮಸ್ಥಳ ಕೇಸ್: ದೂರುದಾರ ಮಾಸ್ಕ್ ಮ್ಯಾನ್ 10 ದಿನ SIT ಕಸ್ಟಡಿಗೆ.

ದಕ್ಷಿಣ ಕನ್ನಡ,ಆಗಸ್ಟ್,23,2025 (www.justkannada.in):  ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣ ಆರೋಪ ಪ್ರಕರಣ ಸಂಬಂಧ ದೂರುದಾರ ಮಾಸ್ಕ್  ಮ್ಯಾನ್ ಚಿನ್ನಯ್ಯನನ್ನು 10 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಬೆಳ್ತಂಗಡಿ  ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ದೂರು ಪ್ರಕರಣ‍ಕ್ಕೆ ಸಂಬಂಧಿಸಿದಂತೆ  ಸುಳ್ಳು ಆರೋಪದ ಮೇಲೆ ದೂರುದಾರ ಮಾಸ್ಕ್ ಮ್ಯಾನ್  ಚಿನ್ನಯ್ಯನನ್ನ ಎಸ್ ಐಟಿ ಬಂಧಿಸಿತ್ತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿತ್ತು.

ಎಸ್ ಐಟಿ ಮನವಿ ಮೇರೆಗೆ ಬೆಳ್ತಂಗಡಿ  ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ನ್ಯಾಯಾಧೀಶರಾದ ವಿಜಯೇಂದ್ರ ಅವರು ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು 10ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ.

Key words: Dharmasthala case, Complainant, Mask Man, 10 Day, SIT, Custody