ಬೆಂಗಳೂರು,ಆಗಸ್ಟ್,23,2025 (www.justkannada.in): ಧರ್ಮಸ್ಥಳಕ್ಕೂ ಯೂಟ್ಯೂಬರ್ ಸಮೀರ್ ಗೂ ಏನ್ ಸಂಬಂಧ ಯಾರೋ ಹೇಳಿದ ಅಂತಾ ಎಸ್ ಐಟಿ ರಚನೆ ಮಾಡಿ ಅಪಮಾನ ಮಾಡಿದ್ದಾರೆ. ಕೂಡಲೇ ಕಾಂಗ್ರೆಸ್ ರಾಜ್ಯದ ಜನರ ಕ್ಷಮೆ ಕೇಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ದೂರುದಾರ ಚಿನ್ನಯ್ಯ ಬಂಧನ ವಿಚಾರ ಕುರಿತು ಮಾತನಾಡಿದ ಆರ್.ಅಶೋಕ್, ಸಮೀರ್ ಪ್ರಗತಿಪರ ಟೀಂ ಅನ್ನು ಸೆಟಪ್ ಮಾಡಿಕೊಳ್ಳುತ್ತಾನೆ. ನಂತರ ಮುಸುಕುದಾರಿ, ಸುಜಾತಾ ಭಟ್ ರನ್ನ ರೆಡಿ ಮಾಡುತ್ತಾನೆ. ಇದೇ ರೀತಿ ಎಲ್ಲಾ ಆಗಬೇಕು ಅಂತಾ ಪ್ಲಾನ್ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯಗಿಂತ ಇವರಿಗೆ ಸೆಕ್ಯೂರಿಟಿ ಕೊಟ್ಟಿದ್ದಾರೆ. ಧರ್ಮಸ್ಥಳ ಮಂಜುನಾಥನನ್ನು ಅವಹೇಳನ ಮಾಡಬೇಕು ಹಿಂದೂಗಳನ್ನ ಮತಾಂತರ ಮಾಡಬೇಕು ಅಂತಾ ಇದರ ಉದ್ದೇಶ. ಸಮೀರ್ ಗೂ ಧರ್ಮಸ್ಥಳಕ್ಕೂ ಏನ್ ಸಂಬಂಧ ಯಾವಾಗಲಾದರೂ ಮಸೀದಿಯನ್ನ ಹೀಗೆ ಅಗೆದಿದ್ದಾರಾ? ಎಂದು ಕಿಡಿಕಾರಿದರು.
ಹಿಂದೂಗಳನ್ನ ಟಾರ್ಗೆಟ್ ಮಾಡುವವರಯ ಸಿಎಂ ಸಂಫುಟದಲ್ಲಿ ಇದ್ದಾರೆ. ಡಿಕೆ ಶಿವಕುಮಾರ್ ಮಾತ್ರ ಕಾಟಾಚಾರಕ್ಕೆ ಏನೋ ಮಾತನಾಡುತ್ತಾ ಇದ್ದಾರೆ. ಕೋಟ್ಯಾಂತರ ರೂ ಖರ್ಚು ಮಾಡಿದರಲ್ಲಾ ಅದನ್ನ ಸರ್ಕಾರ ಭರಿಸುತ್ತಾ? ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷ ಕ್ಷಮೆ ಕೇಳಬೇಕು. ಆತ ಹೇಳಿದೆಲ್ಲಾ ಸುಳ್ಳು ಅಂತಾ ಸದನದಲ್ಲೇ ಹೇಳಿದ್ದೆ. ವಿದೇಶದಿಂದ ಹಣ ಬಂದಿದೆ ಅಂತಾ ಸಂಸದರು ಪತ್ರ ಬರೆದಿದ್ದಾರೆ. ಸರ್ಕಾರವೇ ಎನ್ಐಎಗೆ ಕೊಟ್ಟರೆ ಒಳ್ಳೆಯದು ಎಂದು ಆರ್.ಅಶೋಕ್ ಒತ್ತಾಯಿಸಿದರು.
Key words: Dharmasthala, Sameer, Congress, apologize, R. Ashok