ಬೆಳ್ಳಂಬೆಳಿಗ್ಗೆ ‘ಕೈ’ ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಶಾಕ್: 17 ಕಡೆಗಳಲ್ಲಿ ದಾಳಿ

ಚಿತ್ರದುರ್ಗ, ಆಗಸ್ಟ್,22,2025 (www.justkannada.in): ಬೆಳ್ಳಂ ಬೆಳಗ್ಗೆ ಚಿತ್ರದುರ್ಗದ ಕಾಂಗ್ರೆಸ್​ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಇಡಿ ಅಧಿಕಾರಿಗಳು ಶಾಕ್​  ನೀಡಿದ್ದು ಮನೆ ಮೇಲೆ ​ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಖಾಸಗಿ ವಾಹನಗಳಲ್ಲಿ ಆಗಮಿಸಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿ 17 ಕಡೆ ಇಡಿ ದಾಳಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 20ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿರುವ  ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ, ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು. ಚಳ್ಳಕೆರೆ ನಗರದಲ್ಲಿನ ಶಾಸಕ ಕೆಸಿ ವೀರೇಂದ್ರ ಪಪ್ಪಿ ನಿವಾಸ ಹಾಗೂ ಅಣ್ಣ ಕೆಸಿ ನಾಗರಾಜ್, ಕೆಸಿ ಸ್ವಾಮಿ ಮನೆಯ ಮೇಲೂ ದಾಳಿ ನಡೆಸಿದ್ದಾರೆ.

ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಪಪ್ಪಿ ನಿವಾಸ ಹಾಗೂ ಬೆಂಗಳೂರಿನ ವಸಂತನಗರದಲ್ಲಿರೋ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಶಾಸಕ ವೀರೇಂದ್ರ ಪಪ್ಪಿ ಮಾಲೀಕತ್ವದ ಕಂಪನಿಗಳ ಮೂಲಕ ಮನಿಲ್ಯಾಂಡ್ರಿಂಗ್ ಆರೋಪ ಕೇಳಿ ಬಂದಿದೆ.

Key words: ED, Raid, Congress, MLA, Veerendra Pappi