ಮಹೇಶ್ ತಿಮರೋಡಿ ಬಂಧನ ವೇಳೆ ಕರ್ತವ್ಯಕ್ಕೆ ಅಡ್ಡಿ: ಮೂವರು ಅರೆಸ್ಟ್

ಉಡುಪಿ,ಆಗಸ್ಟ್,21,2025 (www.justkannada.in):   ಬಿಎಲ್ ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ತಿಮರೋಡಿ ಬಂಧಿಸಿ ಕರೆದೊಯ್ಯುತ್ತಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮೂವರನ್ನ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸೃಜನ್, ಹಿತೇಶ್, ಸಹನ್ ಬಂಧಿತ ಆರೋಪಿಗಳು. ಮೂವರನ್ನು  ಕಾರ್ಕಳ ತಾಲ್ಲೂಕಿನ ಹೊಸಮಾರು ಬಳಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇಂದು  ಮಹೇಶ್ ತಿಮರೋಡಿ ಅವರನ್ನ ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರೊಂದಿಗೆ ಅಡಿಷನಲ್ ಎಸ್ಪಿ ಕಾರು ತೆರಳುತ್ತಿತ್ತು.  ಅಡಿಷನಲ್ ಎಸ್ಪಿ ಅವರ ಕಾರಿಗೆ ಹಿಂದಿನಿಂದ ಮೂವರು ಆರೋಪಿಗಳಿದ್ದ ಕಾರು ಗುದ್ದಿತ್ತು. ಇದೀಗ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಮೂವರನ್ನ ಬಂಧಿಸಲಾಗಿದೆ.

Key words: Mahesh Timarodi, arrest, interrupts duty, three arrest