ಬೆಂಗಳೂರು,ಆಗಸ್ಟ್,20,2025 (www.justkannada.in): ರಾಜ್ಯ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯುತ್ತಿದ್ದು, ವಿಧಾನಸಭೆಯಲ್ಲಿ ಇಂದು ಮೂರು ವಿಧೇಯಕಗಳನ್ನ ವಾಪಸ್ ಪಡೆಯಲಾಗಿದೆ.
ನೋಂದಣಿ ತಿದ್ದುಪಡಿ ವಿಧೇಯಕ, ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ, ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕಗಳನ್ನ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಶಾಸನ ರಚನಾ ಕಲಾಪದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಮೂರೂ ವಿಧೇಯಕಗಳನ್ನು ಮಂಡಿಸಿ ಹಿಂದಕ್ಕೆ ಪಡೆಯಲು ಮನವಿ ಮಾಡಿದರು.
ಈ ಮೂರೂ ವಿಧೇಯಕಗಳಿಗೆ ಸಂಬಂಧಿಸಿದಂತೆ ಈಗಾಗಲೇ ಹೊಸದಾಗಿ ಹಲವಾರು ಸುಧಾರಣೆ ಕ್ರಮಗಳು, ಅನೇಕ ವಿಚಾರಗಳನ್ನೊಳಗೊಂಡ ವಿಧೇಯಕಗಳನ್ನು ತರಲಾಗಿದ್ದು, ಈ ವಿಧೇಯಕಗಳು ಅಗತ್ಯವಿರಲಿಲ್ಲ. ಹೀಗಾಗಿ ಇವುಗಳನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿದರು. ಬಳಿಕ ಸಭಾಧ್ಯಕ್ಷರು ಈ ವಿಧೇಯಕಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಪ್ರಕಟಿಸಿದರು.
Key words: Three bills, withdrawn , Assembly