ಏಷ್ಯಾಕಪ್​ ಗೆ ಭಾರತ ತಂಡ ಪ್ರಕಟ: ಕನ್ನಡಿಗರಿಗಿಲ್ಲ ಸ್ಥಾನ

ಮುಂಬೈ,ಆಗಸ್ಟ್,19,2025 (www.justkannada.in): ಸೆಪ್ಟಂಬರ್ 9ರಿಂದ ಆರಂಭವಾಗುವ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

15 ಸದಸ್ಯರುಗಳ ಈ ತಂಡದಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದು ಶುಭ್​ಮನ್ ಗಿಲ್ ಉಪನಾಯಕರಾಗಿದ್ದಾರೆ. ತಂಡದಲ್ಲಿ ಕನ್ನಡಿಗರಿಗೆ ಸ್ಥಾನ ಸಿಕ್ಕಿಲ್ಲ. ಇನ್ನು ತಂಡದಲ್ಲಿ  ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ರಿಂಕುಸಿಂಗ್,  ಜಿತೇಶ್ ಶರ್ಮಾ, ಆಲ್ ರೌಂಡರ್ ಆಗಿ  ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಸ್ಥಾನ ಪಡೆದಿದ್ದಾರೆ. ಬೌಲರ್​​ ಗಳಾಗಿ ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ಜಸ್​ಪ್ರೀತ್ ಬುಮ್ರಾ ಹರ್ಷಿತ್ ರಾಣಾ ತಂಡದಲ್ಲಿದ್ದಾರೆ. ಏಷ್ಯಾಕಪ್ ​ಗೆ ಭಾರತ ಟಿ20 ತಂಡ ಈ ಕೆಳಗಿನಂತಿದೆ…

ಏಷ್ಯಾ ಕಪ್ಗಾಗಿ ಭಾರತ ತಂಡ: ಸೂರ್ಯಕುಮಾರ್ಯಾದವ್ (ನಾಯಕ), ಶುಭ್​ ಮನ್ ಗಿಲ್ (ಉಪನಾಯಕ), ಸಂಜುಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಜಿತೇಶ್  ಶರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ

ಸೆಪ್ಟೆಂಬರ್ 10 ರಂದು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನುಎದುರಿಸಲಿದೆ. ಸೆಪ್ಟೆಂಬರ್ 14 ರಂದು ಪಾಕಿಸ್ತಾನ ಎದುರಿಸಲಿದೆ.  ಸೆಪ್ಟೆಂಬರ್ 19ರಂದು  ಒಮಾನ್ ವಿರುದ್ಧ ಆಡಲಿದೆ.

Key words: India team, announced ,Asia Cup