ಬೆಂಗಳೂರು,ಆಗಸ್ಟ್,19,2025 (www.justkannada.in): ಇವಿಎಂ ದುರ್ಬಳಕ್ಕೆ ಮಾಡಿ ಮತಗಳ್ಳತನ ಮಾಡಲಾಗುತ್ತಿದೆ. ಇದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕವಾದದು. ಈ ಅಕ್ರಮ ತಡೆಗಟ್ಟಬೇಕು ಎಂದು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಆಗ್ರಹಿಸಿದರು.
ಇಂದು ವಿಧಾನ ಪರಿಷತ್ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಬಿ.ಕೆ ಹರಿಪ್ರಸಾದ್ ಇವಿಎಂ ದುರ್ಬಳಕೆ ಮಾಡಿ ಮತಗಳ್ಳತನ ಮಾಡಲಾಗುತ್ತಿದೆ. ಪಾರದರ್ಶಕ ವ್ಯವಸ್ಥೆ ಜಾರಿ ಮಾಡಿ ಈ ಅಕ್ರಮ ತಡೆಗಟ್ಟಬೇಕು. ಮಹಾರಾಷ್ಟದ ಚುನಾವಣೆಯಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ58.22 ರಷ್ಟು ಮತದಾನವಾಗಿತ್ತು. ಆದರೆ ಶೇ 66.05 ರಷ್ಟ ಮತದಾನಾವಾಗಿದೆ ಎಂದು ಘೋಷಣೆ ಮಾಡಿದರು. ಹೆಚ್ಚವರಿ 48 ಲಕ್ಷ ಮತಗಳು ಎಲ್ಲಿಂದ ಬಂದವು. ಇದು ಸಂವಾದದಲ್ಲಿ ಕಂಡು ಬಂದ ಪ್ರಶ್ನೆಯಾಗಿರುತ್ತದೆ ಎದ್ದೇಳು ಕರ್ನಾಟಕ ಸಂಘಟನೆ ಆಯೋಜಿಸಿದ್ದ ಸಂವಾದದಲ್ಲಿ ಈ ಪ್ರಶ್ನೆ ಎದ್ದಿದೆ. ಅಲ್ಲಿ ಬಿಜೆಪಿ ಮೈತ್ರಿ 2ಸಾವಿರ ಮತಗಳ ಅಂತರದಿಂದ 25 ಕ್ಷೇತ್ರಗಳು, 10 ಸಾವಿ ಮತಗಳ ಅಂತರದಿಂದ 29ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಮತದಾರರ ಸಂಖ್ಯೆ ಹೆಚ್ಚಳ ಬಗ್ಗೆ ಚುನಾವಣಾಧಿಕಾರಿ ಉತ್ತರಿಸಿಲಲ್ಲ. ಇದೇ ರೀತಿ ಬಿಹಾರದಲ್ಲಿ ಚುನಾವಣೆಯಲ್ಲಿ ನಡೆಯುವ ಆತಂಕ ಇದೆ ಎಂದರು.
ಚುನಾವಣಾ ಆಯೋಗದ ಕ್ರಮವನ್ನ ಸದನ ಖಂಡಿಸಬೇಕು. ಈ ಬಗ್ಗೆ ಸರ್ಕಾರ ನಿರ್ಣಯ ತೆಗೆದುಕೊಂಡು ಕೇಂದ್ರಕ್ಕೆ ಕಳುಹಿಸಬೇಕು. ಸಿಎಂಗೆ ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ ಎಂದರು.
Key words: Vote rigging, MLC, BK Hariprasad ,Legislative council