ಬೆಂಗಳೂರು,ಆಗಸ್ಟ್,18,2025 (www.justkannada.in): ಸಿಎಂ 24 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ಮಹೇಶ್ ತಿಮರೋಡಿಯ ವಿರುದ್ದ ಕ್ರಮಕೈಗೊಳ್ಳಿ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಆಗ್ರಹಿಸಿದರು.
ಇಂದು ವಿಧಾನಸಭೆ ಕಲಾಪದಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಪ್ರಸ್ತಾಪಿಸಿದ ಆರ್.ಅಶೋಕ್ ಅವರು, ಮಹೇಶ್ ತಿಮರೋಡಿ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಶಾಸಕ ಸುರೇಶ್ ಕುಮಾರ್ ಸಹ ಧ್ವನಿಗೂಡಿಸಿದರು. ಆರೋಪಗಳ ಬಗ್ಗೆ ಡಿಕೆ ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಉತ್ತರ ಕೊಡಿ ಎಂದು ಆರ್ ಅಶೋಕ್ ಪಟ್ಟು ಹಿಡಿದರು.
ರಾಜ್ಯದ ಸಿಎಂ 28 ಕೊಲೆ ಮಾಡಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಸದನದ ವೇಳೆ ಈ ರೀತಿ ಹೇಳುತ್ತಾನೆ ಅಂದರೆ ಗೂಂಡಾ ರಾಜ್ಯ ಆಗಿದೆಯೇ? ಹಾಗಾದ್ರೆ ಸಿಎಂ 28 ಕೊಲೆ ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕಾ? ಸಿಎಂ ಕೊಲೆಗಡುಕರು ಅಂತಾ ಹೇಳಬೇಕಾ..? ಎಂದು ಕಿಡಿಕಾರಿದರು.
ಈ ಸರ್ಕಾರಕ್ಕೆಕ ಕಿವಿನೂ ಇಲ್ಲ ಕಣ್ಣೂ ಇಲ್ಲ. ಡಿಕೆ ಶಿವಕುಮಾರ್ ಹೊರಗಡೆ ಮಾತಾಡಿದ್ದಾರೆ. ಇಲ್ಲಿ ಮಾತಾಡಲಿ ಎಂದು ಅಶೋಕ್ ಒತ್ತಾಯಿಸಿದರು.
Key words: R. Ashok, demands ,action, against, Mahesh Timarodi, Statement, CM