ನಿಗೂಢ ಸ್ಪೋಟ: ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,15,2025 (www.justkannada.in):  ಬೆಂಗಳೂರಿನ ವಿಲ್ಸನ್ ಗಾರ್ಡ್ ಬಳಿಯ ಚಿನ್ನಯ್ಯನಪಾಳ್ಯದಲ್ಲಿ ನಿಗೂಢ ಸ್ಪೋಟಗೊಂಡು 10ವರ್ಷ ಬಾಲಕ ಮುಬಾರಕ್  ಸಾವನ್ನಪ್ಪಿದ್ದು ಮೃತ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 5 ಲಕ್ಷ ರೂ. ಪರಿಹಾರವನ್ನ ಘೋಷಣೆ ಮಾಡಿದ್ದಾರೆ.

ಇಂದು ಸ್ಪೋಟದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇವತ್ತು ಅಹಿತಕರ ಘಟನೆ ನಡೆದಿದೆ. ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಢರ್ ಸ್ಪೋಟದಂತೆ ಕಂಡು ಬಂದಿದೆ. ಕಸ್ತೂರಮ್ಮ ಎಂಬುವವರಿಗೆ ಸೇರಿದ ಮನೆಯಲ್ಲಿ ಸ್ಪೋಟವಾಗಿದೆ.  ಘಟನೆಯಲ್ಲಿ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದಾನೆ.  9 ಜನರು ಗಾಯಯೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮುಬಾರಕ್ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುತ್ತೇವೆ ಎಂದು ಘೋಷಸಿದರು.

ಹಾಗೆಯೇ ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ ಸ್ಪೋಟದ ತೀವ್ರತೆಗೆ ಸುಮಾರು 13 ಮನೆಗಳಿಗೆ ಹಾನಿಯಾಗಿದ್ದು  ಹಾನಿಯಾದ ಹಾನಿಯಾಗಿರುವ ಮನೆಗಳನ್ನ ಕಟ್ಟಿಸಿಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

Key words: Mysterious, explosion, Bangalore, CM, Siddaramaiah