ಹಾಡಹಗಲೇ ಮಹಿಳಾ ಅಧಿಕಾರಿಗೆ ಲೈಂಗಿಕ ದೌರ್ಜನ್ಯ: ಮೊಬೈಲ್ ಕಿತ್ತುಕೊಂಡು ದರೋಡೆಕೋರ ಪರಾರಿ

ಬೆಂಗಳೂರು, ಆಗಸ್ಟ್​ 13,2025 (www.justkannada.in): ಹಾಡಹಗಲೇ ದರೋಡೆಕೋರನೋರ್ವ  ಪಿಜಿಗೆ ನುಗ್ಗಿ ಮಹಿಳಾ ಅಧಿಕಾರಿಗೆ ಚಾಕು ತೋರಿಸಿ ಹೆದರಿಸಿ ಲೈಂಗಿಕ ದೌರ್ಜನ್ಯವೆಸಗಿ ನಂತರ ಮೊಬೈಲ್​ ಕಿತ್ತುಕೊಂಡು ಪರಾರಿ  ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆಗಸ್ಟ್​ 11ರಂದು ಜುಡಿಷಿಯಲ್ ಲೇಔಟ್​ನ ಲೇಡಿಸ್ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಮೇಲೆಯೇ ಈ ದೌರ್ಜನ್ಯವೆಸಗಲಾಗಿದೆ.

15 ದಿನಗಳ ಹಿಂದಷ್ಟೇ ಮಹಿಳೆ ಜುಡಿಷಿಯಲ್ ಲೇಔಟ್​ ನ ಶಿವಾಸ್ ಲೇಡಿಸ್ ಪಿಜಿಗೆ ಸೇರಿಕೊಂಡಿದ್ದರು. ಆಗಸ್ಟ್​ 11ರಂದು ಮಧ್ಯಾಹ್ನ ಕೆಲಸ ಮುಗಿಸಿ ಪಿಜಿಯಲ್ಲಿನ 3ನೇ ಮಹಡಿಯಲ್ಲಿರುವ ತನ್ನ ರೂಮಿಗೆ ಆಗಮಿಸಿದ್ದರು.

ಈ ವೇಳೆ ಏಕಾಏಕಿ ಬಂದ ದರೋಡೆಕೋರ ಚಾಕು ಸಮೇತ  ಪಿಜಿಗೆ ನುಗ್ಗಿ ಮಹಿಳೆಯಿದ್ದ ರೂಮ್​​ ಡೋರ್ ಬಡೆದಿದ್ದಾನೆ. ಪಿಜಿಯವರು ಇರಬಹುದೆಂದು ಮಹಿಳೆ ಬಾಗಿಲು ತೆರೆದಿದ್ದಾರೆ.  ಈ ವೇಳೆ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದ ಖದೀಮ, ದೌರ್ಜನ್ಯವೆಸಗಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬೆಡ್​ ಮೇಲಿದ್ದ 2 ಮೊಬೈಲ್​ ಗಳು ತೆಗೆದುಕೊಂಡು ಪರಾರಿ ಆಗಿದ್ದಾನೆ. ಘಟನೆ ಕುರಿತು ಯಲಹಂಕ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Key words: Female officer, sexually, assault, Robber