ಮೈಸೂರು, ಆ.೧೩,೨೦೨೫ : ನಗರದ ಹೊರವಲಯದಲ್ಲಿರುವ ರಾಯನಕೆರೆಯಲ್ಲಿ ವರ್ಷಗಳ ಹಿಂದೆಯೇ ರಾಜ್ಯದ ಮೊದಲ ನಾಯಿ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದ್ದು, ಬಳಕೆಗೆ ಬಾರದೆ ನಿರುಪಯುಕ್ತವಾಗಿದೆ. ಆಮೂಲಕ ತೆರಿಗೆದಾರರ ಕೋಟ್ಯಾಂತರ ರೂ. ಹಣ ವ್ಯರ್ಥವಾಗಿದೆ.
೨೦೨೨-೨೩ರಲ್ಲಿ ಈ ಕೇಂದ್ರ ಉದ್ಘಾಟನೆಗೊಂಡಿತು. ಸರಿಯಾದ ವೈದ್ಯಕೀಯ ಆರೈಕೆಯಿಲ್ಲದೆ ನಿರ್ಲಕ್ಷ್ಯಕೊಳಗಾದ ನಾಯಿಗಳು ಅಥವಾ ಮೈಸೂರಿನ ಬೀದಿ ನಾಯಿಗಳಿಗೆ ಈ ಪುನರ್ವಸತಿ ಕೇಂದ್ರದಲ್ಲಿ ಆಹಾರ, ಆಶ್ರಯ ಮತ್ತು ವೈದ್ಯಕೀಯ ಆರೈಕೆ ಒದಗಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಯಿತು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕ ಎಸ್.ಎ. ರಾಮದಾಸ್ ಅವರ ಕನಸಿನ ಕೂಸಾದ ಈ ಯೋಜನೆಯನ್ನು ಪಶುಸಂಗೋಪನಾ ಇಲಾಖೆ ಕಾರ್ಯಗತಗೊಳಿಸಿತ್ತು. ಜತೆಗೆ ಮಹಾತ್ಮ ಗಾಂಧಿ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಲಾದ ಒಟ್ಟು 5 ಎಕರೆ ಭೂಮಿಯಲ್ಲಿ 2.5 ಎಕರೆ ವಿಸ್ತೀರ್ಣದಲ್ಲಿ ಈ ಪುನರ್ವಸತಿ ಕೇಂದ್ರ ನಿರ್ಮಾಣಗೊಂಡಿದೆ . ಇದಕ್ಕಾಗಿ ಅಂದಾಜು ರೂ. 2.60 ಕೋಟಿ ರೂ. ವ್ಯಯಿಸಲಾಗಿದೆ.
ಮೈಸೂರಿನ ಪ್ರಮುಖ ನಗರ ಪ್ರದೇಶಗಳಿಂದ ಕೈಬಿಡಲಾದ ನೂರಾರು ನಾಯಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಅವುಗಳ ಆರೈಕೆಗೆ ಇಲ್ಲಿ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿತ್ತು. ಇದರಿಂದ ಬೀದಿ ನಾಯಿಗಳಿಗೆ ಆಹಾರ ನೀಡುವುದು ಸೇರಿದಂತೆ ಸರಿಯಾದ ವೈದ್ಯಕೀಯ ಆರೈಕೆ ಒದಗಿಸಲು ಚಿಂತಿಸಲಾಗಿತ್ತು.
ನಾಯಿ ಪುನರ್ವಸತಿ ಕೇಂದ್ರ ಎರಡು ವಿಭಾಗಗಳನ್ನು ಹೊಂದಿದ್ದು, ಒಂದು ವಿಭಾಗದಲ್ಲಿ ಆರೋಗ್ಯವಂತ ನಾಯಿಗಳನ್ನು ಇರಿಸಲು ಉದ್ದೇಶಿಸಿದ್ದರೆ, ಇನ್ನೊಂದು ವಿಭಾಗದಲ್ಲಿ ಅನಾರೋಗ್ಯ ಪೀಡಿತ ಬೀದಿ ನಾಯಿಗಳನ್ನು ಇರಿಸಲು ತೀರ್ಮಾನಿಸಲಾಗಿತ್ತು.
ತೀವ್ರವಾಗಿ ಅಸ್ವಸ್ಥಗೊಂಡ ನಾಯಿಗಳಿಗೆ ಪ್ರತ್ಯೇಕ ವಿಭಾಗವಿದ್ದು, ಚಿಕಿತ್ಸೆಗಾಗಿ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಮರಿಗಳಿಗೆ ವಿಶೇಷ ವಿಭಾಗ ಹೊಂದಲಾಗಿತ್ತು.
ಸುಪ್ರೀಂ ತೀರ್ಪು ಸ್ವಾಗತ :
ನಾಯಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ಮಾಡಿ ಎಂಬ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಹಿರಿಯ ವಕೀಲ ಅ.ಮ ಭಾಸ್ಕರ್ . ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದಿಷ್ಟು…
ರಾಜ್ಯಾದ್ಯಂತ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಮೈಸೂರಿನಲ್ಲೂ ಕೂಡ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ನಾಯಿಗಳ ಹಾವಳಿ ತಪ್ಪಿಸಲು ಸುಪ್ರೀಂ ಕೋರ್ಟ್ ಹೇಳಿದಂತೆ ಒಂದು ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕು. ಅಲ್ಲಿ ನಾಯಿಗಳನ್ನು ಇಡಬೇಕು. ಈ ಮೂಲಕ ನಾಯಿಗಳ ಹಾವಳಿಯನ್ನು ತಡೆಯಬಹುದು. ಪ್ರಾಣಿದಯಾ ಸಂಘ ಸುಪ್ರೀಂ ಕೋರ್ಟ್ ತೀರ್ಪು ವಿರೋಧ ಮಾಡ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ತಪ್ಪು ಅನ್ನಿಸಿದ್ರೆ ಅವರು ಮೇಲ್ಮನವಿ ಹೋಗಲಿ. ಸರ್ಕಾರ ಈ ಕೂಡಲೇ ನಾಯಿಗಳ ಹಾವಳಿ ತಡೆಯಲು ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಲಿ. ಬೆಂಗಳೂರಿನಲ್ಲಿ ಚಿಕನ್ ಭಾಗ್ಯ ಎಷ್ಟು ದಿನ ಸರ್ಕಾರ ಕೊಡಲು ಸಾಧ್ಯ? ಮಾಂಸದ ರುಚಿ ನೋಡಿದ ನಾಯಿಗಳು ಸುಮ್ಮನಿರತ್ತಾ? ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕೇಂದ್ರಗಳನ್ನು ಮಾಡಲಿ ಮೈಸೂರಿನಲ್ಲಿ ವಕೀಲ ಭಾಸ್ಕರ್ ಹೇಳಿಕೆ
ಸಂತಾನ ಹರಣದ ಬಗ್ಗೆ ಡೌಟು:
ಈ ಹಿಂದೆಯೇ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ 3 ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರ ಕಟ್ಟಿದ್ದೇವೆ. ಶ್ವಾನಗಳಿಗೆ ಅಲ್ಲಿ ಬೇಕಾದ ವ್ಯವಸ್ಥೆ ಮಾಡಿದ್ದೇವೆ. ಸಂತಾನ ಹರಣ ಸರಿಯಾಗಿ ಆಗಿದ್ರೆ ಶ್ವಾನಗಳ ಸಂಖ್ಯೆ ಜಾಸ್ತಿಯಾಗುತ್ತಿರಲಿಲ್ಲ. ಸಂತಾನ ಹರಣ ಪ್ರಕ್ರಿಯೆಯೇ ಕೂಡ ಸರಿಯಾದ ರೀತಿ ಆಗಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಈ ಕೂಡಲೇ ಮೈಸೂರು ಮಹಾನಗರ ಪಾಲಿಕೆ ಶ್ವಾನಗಳ ಹಾವಳಿ ತಪ್ಪಿಸಬೇಕು. ರಾಜ್ಯಕ್ಕೆ ಮಾದರಿಯಾಗಬೇಕು. ಮೈಸೂರಿನಲ್ಲಿ ಮಾಜಿ ಮೇಯರ್ ಶಿವಕುಮಾರ್ ಹೇಳಿಕೆ.
key words: state’s first, dog rehabilitation center, Mysore, defunct.
SUMMARY:
The state’s first dog rehabilitation center in Mysore is now defunct.
The state’s first dog rehabilitation centre, built years ago in Rayanakere on the outskirts of the city, has been left unused and useless. Crores of taxpayers’ money have been wasted. The centre was inaugurated in 2022-23. It was started with the aim of providing food, shelter and medical care to stray dogs or stray dogs of Mysore who are neglected without proper medical care.