ದಸರಾ ಫಲಪುಷ್ಪ ಪ್ರದರ್ಶನ:  ಆ.19 ರಂದು ಫ್ಲೋರಲ್ ಪರಿಕಲ್ಪನೆಗಳು ಅಂತಿಮ.

ಮೈಸೂರು,ಆಗಸ್ಟ್,13,2025 (www.justkannada.in):  ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಜಿಲ್ಲಾ, ತೋಟಗಾರಿಕೆ ಸಂಘ (ರಿ) ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಸೆಪ್ಟಂಬ್ 22 ರಿಂದ ಅಕ್ಟೋಬರ್ 2ರವರೆಗೆ ಫಲಪುಷ್ಪ ಪ್ರದರ್ಶನವನ್ನ ಏರ್ಪಡಿಸಲಾಗಿದೆ.

11 ದಿನಗಳ ಕಾಲ ಕುಪ್ಪಣ್ಣ ಉದ್ಯಾನವನ (ನಿಷಾದ್ ಬಾಗ್) ಆವರಣದಲ್ಲಿ  ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಕುಪ್ಪಣ್ಣ ಉದ್ಯಾನವನದ ಗಾಜಿನ ಮನೆಯೊಳಗೆ ಮುಖ್ಯ ಪ್ಲೋರಲ್ ಕಾನ್ಸೆಪ್ಟ್ ಆಗಿ ಸಬರಮತಿ ಆಶ್ರಮ ಮಹಾತ್ಮ ಗಾಂಧಿ ಅವರ ತತ್ತ್ವಗಳು ಹಾಗೂ ಕುಪ್ಪಣ್ಣ ಉದ್ಯಾನವನದ ಆವರಣದಲ್ಲಿ ವಿವಿಧ ಫ್ಲೋರಲ್ ಕಾನ್ಸೆಪ್ಟ್ ಗಳ ವಿನ್ಯಾಸವನ್ನು ಆಗಸ್ಟ್ 19 ರಂದು ಅಂತಿಮಗೊಳಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ  ಅಂದು ಬೆಳಿಗ್ಗೆ 11.00 ಗಂಟೆಗೆ ಮರೀಗೌಡರ ಸಭಾಂಗಣ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿಗೆ ಆಸಕ್ತಿಯುಳ್ಳ ವಿವಿಧ ಸಂಸ್ಥೆಯವರು ಫ್ಲೋರಲ್ ಪರಿಕಲ್ಪನೆಗಳ ಸಂಕ್ಷಿಪ್ತ ಪ್ರಸ್ತಾವನೆಯೊಂದಿಗೆ ಖುದ್ದು ಹಾಜರಾಗಿ ತಮ್ಮ ಪ್ರಸ್ತಾವನೆಗಳನ್ನು ವಿವರಿಸುವಂತೆ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore, Dasara, Flower Show, Floral concepts