ತುಮಕೂರು,ಆಗಸ್ಟ್,12,2025 (www.justkannada.in): ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನ ವಜಾಗೊಳಿಸಿದ್ದನ್ನು ಖಂಡಿಸಿ ನಾಳೆ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕೆ.ಎನ್ ರಾಜಣ್ಣ ಬೆಂಬಲಿಗರು ತಿಳಿಸಿದ್ದಾರೆ.
ಇಂದು ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜಣ್ಣ ಬೆಂಬಲಿಗರು, ಹೈಕಮಾಂಡ್ ನಿರ್ಧಾರವನ್ನ ನಾಯಕ ಸಮಾಜ ಖಂಡಿಸುತ್ತದೆ. ಕೆಎನ್ ರಾಜಣ್ಣ ಅವರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೇ ತಾಲ್ಲೂಕು ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೆ.ಎನ್ ರಾಜಣ್ಣ ಅವರ ವಿರುದ್ದ ಪಿತೂರಿ ಮಾಡಲಾಗಿದೆ. ರಾಜಣ್ಣ ಅವರ ವಜಾ ಖಂಡಿಸಿ ನಾಳೆ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬೆಂಬಲಿಗರು ತಿಳಿಸಿದ್ದಾರೆ.
Key words: KN Rajanna, supporters, decision, massive protest, Tumkur