ಮೈಸೂರು,ಆಗಸ್ಟ್,11,2025 (www.justkannada.in): ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೈಸೂರಿನ ಹಾರಿಕಾ ಎನ್. ಅದ್ಭುತ ಈಜು ಪ್ರತಿಭೆಯನ್ನು ಪ್ರದರ್ಶಿಸಿ 3 ಚಿನ್ನ, 2ಕಂಚಿನ ಪದಕ ಪಡೆದು, ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ( SGFI)ಗೆ ಆಯ್ಕೆಯಾಗಿದ್ದಾರೆ.
ಕೇಂದ್ರಿಯ ವಿದ್ಯಾಲಯ ಸಂಘಟನೆಯು ಆ.2ರಿಂದ 6ರವರೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ 54ನೇ ರಾಷ್ಟ್ರಮಟ್ಟದ ಕ್ರೀಡಾಕೂಟವು ದೇಶದಾದ್ಯಾಂತ ಆಯ್ಕೆಯಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. ಇದರಲ್ಲಿ ಹಾರಿಕಾ ಅವರು ಈಜು ವಿಭಾಗದಲ್ಲಿ ತೀವ್ರ ಪೈಪೋಟಿ ನೀಡಿ ಸಾಧನೆ ಮೆರೆದಿದ್ದಾರೆ.
ಪದಕಗಳು: 200 ಮೀ ಬ್ರೆಸ್ಟ್ ಸ್ಟ್ರೋಕ್, 100 ಮೀ. ಬ್ರೆಸ್ಟ್ ಸ್ಟ್ರೋಕ್ , 50 ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ 3 ಚಿನ್ನದ ಪದಕ, 2 ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಮೈಸೂರಿನ ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದ ಗ್ಲೋಬಲ್ ಸ್ಪೋಟ್ಸ್ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಇವರ ಕ್ರೀಡಾ ಮನೋಭಾವ, ಶ್ರಮ, ನಿಷ್ಠೆ ಮತ್ತು ಕ್ರೀಡಾ ಸಾಮರ್ಥ್ಯ ನಮಗೆ ಹೆಮ್ಮೆ ತಂದಿದೆ” ಎಂದು ಮುಖ್ಯ ತರಬೇತುದಾರ ಪವನ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂದಿನ ಹಂತಗಳಲ್ಲಿ ಸಹ ಯಶಸ್ಸು ಗಳಿಸಲಿ ಎಂದು ಜಿಎಸ್ಎ ತಂಡವು ಆಶಯ ವ್ಯಕ್ತಪಡಿಸಿದೆ.
Key words: KVS, National, Swimming, Championships, Mysore, Harika , 5 medals