ಮಾಸ್ ಲೀಡರ್ ಸಿಎಂ ಸಿದ್ದರಾಮಯ್ಯರಿಂದ ಉತ್ತಮ ಆಡಳಿತ: ಇಡೀ ದೇಶವೇ ಗಮನಿಸುತ್ತಿದೆ- ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು

ಮೈಸೂರು,ಆಗಸ್ಟ್,11,2025 (www.justkannada.in): ರಾಜ್ಯದಲ್ಲಿ ಮಾಸ್ ಲೀಡರ್ ಆಗಿ ಉತ್ತಮ ಆಡಳಿತ ಕೊಡುತ್ತಿರುವ ಸಿದ್ದರಾಮಯ್ಯನವರ ಆಡಳಿತವನ್ನ ಇಡೀ ದೇಶ ಗಮನಿಸುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ನುಡಿದರು.

ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬದ ಪ್ರಯುಕ್ತ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿಮೆ ಬಾಂಡ್ ವಿತರಣೆ ಮಾಡಲಾಯಿತು. ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಚಿಕ್ಕ ಗಡಿಯಾರದ ಬಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.  ದಿ ಮಾಸ್ ಲೀಡರ್  ಸಿದ್ದರಾಮಯ್ಯ @ 78 ಕಾರ್ಯಕ್ರಮದ ಮೂಲಕ ಸಾರ್ವಜನಿಕರೊಂದಿಗೆ ಮೈಸೂರು ಕಾಂಗ್ರೆಸ್ ಶೀರ್ಷಿಕೆ ಅಡಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬಿ.ಟಿ ಲಲಿತಾ ನಾಯಕ್ ಉದ್ಘಾಟಿಸಿದರು ಶಾಕಸ ಕೆ.ಹರೀಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು,ಮಾಜಿ ಸಚಿವ ಕೋಟೆ ಶಿವಣ್ಣ, ಸ್ಥಳೀಯ ಶಾಸಕ ಕೆ.ಹರೀಶ್ ಗೌಡ ಬಿಜೆ ವಿಜಯಕುಮಾರ್, ಆರ್ ಮೂರ್ತಿ ಕೆ.ಶಿವರಾಮು‌ ಸೇರಿದಂತೆ ನೂರಾರು ಸಾರ್ವಜನಿಕರು, ಲೈಂಗಿಕ ಅಲ್ಪಸಂಖ್ಯಾತರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಅಮೀನ್ ಮಟ್ಟು,  ಈ ದೇಶದಲ್ಲಿ ಒಳ್ಳೆಯ ಮಾಸ್ ಲೀಡರ್ ಜೊತೆಗೆ ಉತ್ತಮ ಆಡಳಿಗಾರಾಗಿದ್ದವರು ಎಂದರೆ ಶ್ರೀಮತಿ ಇಂದಿರಾಗಾಂಧಿ. ಅಂತಹ ಗುಣಗಳು ಇರುವುದು ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ. ಯಡಿಯೂರಪ್ಪ ಅವರು ಮಾಸ್ ಲೀಡರ್ ಆದರೆ ಉತ್ತಮ ಆಡಳಿತಗಾರ ಅಲ್ಲ. ರಾಜ್ಯದಲ್ಲಿ ಮಾಸ್ ಲೀಡರ್ ಆಗಿ ಉತ್ತಮ ಆಡಳಿತ ಕೊಡುತ್ತಿರುವ ಸಿದ್ದರಾಮಯ್ಯನವರ ಆಡಳಿತವನ್ನ ಇಡೀ ದೇಶ ಗಮನಿಸುತ್ತಿದೆ. ಈ ರಾಜ್ಯದ ಪ್ರತಿಯೊಂದು  ಸಮುದಾಯಗಳ ಬಗ್ಗೆ ಯೋಚನೆ ಮಾಡಿ ಎಲ್ಲಾ ಸಮುದಾಯಕ್ಕೆ ಒಂದಲ್ಲ ಒಂದು ಯೋಜನೆಗಳ ತಂದವರು ಸಿದ್ದರಾಮಯ್ಯ. 16 ಬಜೆಟ್ ಮಂಡಿಸಿ ಹಣಕಾಸು ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಜನರ ತೆರಿಗೆ ಹಣದ ಕಾವಲುಗಾರನಾಗಿ ಇತಿಮಿತಿಗಳಲ್ಲಿ ಬಳಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೈಯಲ್ಲಿ ಇವತ್ತಿಗೂ ಕೂಡ ಮೊಬೈಲ್ ಇಟ್ಟುಕೊಳ್ಳಲ್ಲ. ಅವರು ಒಬ್ಬ ಉತ್ತಮ ಆರ್ಥಿಕ ತಜ್ಞ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೊಗಳಿದರು.

ಸಿದ್ದರಾಮಯ್ಯ ಕಾರ್ಯಸಾಧನೆಗಳ ಕೊಂಡಾಡಿದ ಶಾಸಕ ಹರೀಶ್ ಗೌಡ.

ಶಾಸಕ ಹರೀಶ್ ಗೌಡ ಮಾತನಾಡಿ,  ಸಿದ್ದರಾಮಯ್ಯ ಈ ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ. ಇವರು ಬಗ್ಗೆ ಬಿಜೆಪಿಯವರು ಇಲ್ಲ ಸಲ್ಲದ ಟೀಕೆ ಮಾಡುತ್ತಾರೆ. ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರ ಅಪಾರ ಕೊಡುಗೆಯನ್ನ ಕೊಟ್ಟಿದ್ದಾರೆ. ಅವರು ಮೈಸೂರಿಗೆ ಕೊಟ್ಟಿರುವ ಕೊಡುಗೆ ನಮ್ಮ ಕಣ್ಣೆದುರುಗಿವೆ. ವರುಣ ನಾಲೆ ತರುವುದರಲ್ಲಿ ಪ್ರಮುಖ ಪಾತ್ರ ವಹಿಸಿ ಲಕ್ಷಾಂತರ ಹೆಕ್ಟೇರ್ ಪ್ರದೇಶ ನೀರಾವರಿ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಅವರು ಆರೋಗ್ಯ ಮತ್ತು ಶಿಕ್ಷಣಕ್ಕೂ ಅಪಾರ ಕೊಡುಗೆ ಕೊಟ್ಟಿರುವುದಕ್ಕೆ ಸಾಕ್ಷಿ ಕೆಆರ್ ಎಸ್ ರಸ್ತೆಯಲ್ಲಿ ಕಟ್ಟಿರುವ ಜಯದೇವ, ಜಿಲ್ಲಾಸ್ಪತ್ರೆ, ಟ್ರಾಮ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಹತ್ತಾರು ಆರೋಗ್ಯ ಕೇಂದ್ರಗಳ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಗಳ ನಿರ್ಮಿಸಿದ್ದಾರೆ. ಇನ್ನು ಹಲವು ಹಾಸ್ಟೆಲ್ ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ.

ಮೈಸೂರಿಗೆ ವೈಟ್ ಟ್ಯಾಪಿಂಗ್ ರಸ್ತೆ ಮಾಡಲು ಈಗ 400 ಕೋಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಒಬ್ಬ ಶೂದ್ರ ಅಂತ ಬಿಜೆಪಿಯವರು ಟಾರ್ಗೆಟ್ ಮಾಡುತ್ತಾರೆ. ಅಂತಹ ವ್ಯಕ್ತಿ ಬಿಜೆಪಿಯಲ್ಲಿ ಮೇಲ್ವರ್ಗದಲ್ಲಿದ್ದರೆ ಅವರನ್ನೇ ದೇವರು ಮಾಡುಬಿಡುತ್ತಿದ್ದರು. ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಹುಟ್ಟಿ ಸಮುದಾಯಗಳ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Key words: Good governance, CM Siddaramaiah, Dinesh Amin Mattu, Mysore