ಚಾಮರಾಜನಗರ,ಆಗಸ್ಟ್,7,2025 (www.justkannada.in): ಚಾಮರಾಜನಗರ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಆಟೋ ವೀಲ್ಹಿಂಗ್ ಪುಂಡಾಟ ಮತ್ತೆ ಮುಂದುವರೆದಿದೆ.
ಕಳೆದ ವಾರ ವ್ಹೀಲಿಂಗ್ ಮಾಡಿದ್ದ ಆಟೋ ಚಾಲಕರಿಗೆ ಪೋಲಿಸರು ಚಳಿ ಬಿಡಿಸಿದ್ದರು. ಇದೀಗ ಮತ್ತೆ ಪುಂಡರು ಪುಂಡಾಟ ಮೆರೆದಿದ್ದು, ಮಲೇ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿಕೊಂಡು ಹೋಗುವ ದೃಶ್ಯ ವೈರಲ್ ಆಗಿದೆ.
ಅಜಾಗರೂಕತೆಯಿಂದ ವೀಲ್ಹಿಂಗ್ ಮಾಡಿಕೊಂಡು ಸಂಚಾರ ಮಾಡುವ ದೃಶ್ಯವನ್ನು ವೈರಲ್ ಆಗಿದ್ದು, ಹಿಂಬದಿಯ ಆಟೋದಲ್ಲಿ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಟೋ ವೀಲ್ಹಿಂಗ್ ವೀಡಿಯೋವನ್ನು ವೀಕ್ಷಿಸಿದ ಮಹದೇಶ್ವರ ಬೆಟ್ಟ ಠಾಣಾ ಪೊಲೀಸರು, ಆಟೋ ವಶ ಪಡೆದುಕೊಂಡು ಪ್ರಕರಣ ದಾಖಲಿಸಲು ಹುಡುಕಾಟ ಆರಂಭಿಸಿದ್ದಾರೆ.
Key words: Auto wheeling, Male Mahadeshwara temple, Video, viral