ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಕುಟುಂಬಕ್ಕೆ 5 ಕೋಟಿ ಪರಿಹಾರ ನೀಡಿ  – ವಾಟಾಳ್ ನಾಗರಾಜ್ ಒತ್ತಾಯ

ಮೈಸೂರು,ಆಗಸ್ಟ್,6,2025 (www.justkannada.in): ಆರ್ ಸಿಬಿ  ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ 11 ಜನಕ್ಕೆ 5 ಕೋಟಿ ಪರಿಹಾರ ನೀಡಿ ಎಂದು  ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.

ನಗರದ ಹಾರ್ಡಿಂಜ್ ವೃತ್ತದ ಬಳಿ ಪ್ರತಿಭಟನೆ  ವಾಟಾಳ್ ನಾಗರಾಜ್, ಘಟನೆಯ ನೈತಿಕತೆ ಹೊಣೆ ಹೊತ್ತು ಯಾರೂ ರಾಜೀನಾಮೆ ಕೊಡಲಿಲ್ಲ. ಪ್ರಕರಣ ಸಂಪೂರ್ಣ ಮುಚ್ಚಿಹಾಕಿದರು. ಕ್ರಿಕೆಟ್ ಮಂಡಳಿ ಸತ್ತ ವ್ಯಕ್ತಿಗಳ ಕುಟುಂಬಕ್ಕೆ 5 ಕೋಟಿ ಕೊಡಲೇ ನೀಡಬೇಕು. ಸಂಭ್ರಮಾಚಾರಣೆಯನ್ನ ಸರ್ಕಾರ ನಾವು ಮಾಡಿಲ್ಲ ಅಂತಾ ಹೇಳಿ ವಿಧಾನಸೌಧದ ಬಳಿ ಆಟಗಾರರನ್ನ ಕರೆಸಿ ಕುಟುಂಬಸ್ಥರ ಜೊತೆ ಫೋಟೋ ತೆಗೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ತನಿಖಾ ತಂಡ ಈಗಾಗಲೇ ವರದಿ ನೀಡಿದೆ. ಆ ವರದಿ  ನ್ಯಾಯಾಧೀಶರು ಕೊಟ್ಟ  ವರದಿಯಂತಿಲ್ಲ  ಸರ್ಕಾರವೇ ಬರೆದುಕೊಟ್ಟ ಹಾಗಿದೆ ಎಂದು ಟೀಕಿಸಿದರು.

ಮೈಸೂರು ದಸರಾ ಮಹೋತ್ಸವವನ್ನ ಅಚ್ವುಕಟ್ಟಾಗಿ ಮಾಡಬೇಕು. ದಸರಾ ಅಂದರೆ ಆನೆ ಕರೆಸೋದು, ಸ್ನಾನ, ವಾಕಿಂಗ್ ಮಾಡಿಸೋದು ಮೆರವಣಿಗೆ ಮಾಡಿಸೋದಲ್ಲ. ಸಾಂಪ್ರದಾಯಿಕ ಪರಂಪರೆಯನ್ನ ಸಾರುವ ಹಾಗೆ ಇರಬೇಕು. ಆಚಾರ ವಿಚಾರ ತಿಳಿಸುವ ಆಚರಣೆ ಮಾಡಬೇಕು. ಚಾಮರಾಜನಗರದಲ್ಲಿ ಪ್ರತಿ ಬಾರಿಯೂ ನಡೆಯುತ್ತಿದ್ದ ಗ್ರಾಮೀಣ ದಸರಾ ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.

ಮಹಾದೇವಪ್ಪರಿಗಿಂತ ಮುಂಚೆ 15 ವರ್ಷಗಳ ಹಿಂದೆ ನಾನೇ ಹೇಳಿದ್ದೆ.

ಕೆ ಆರ್ ಎಸ್ ಡ್ಯಾಮ್ ಗೆ ಟಿಪ್ಪು ಅಡಿಗಲ್ಲಿಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಮಹಾದೇವಪ್ಪರಿಗಿಂತ ಮುಂಚೆ 15 ವರ್ಷಗಳ ಹಿಂದೆ  ನಾನೇ ಹೇಳಿದ್ದೆ. ಮಾಧ್ಯಮ ಪ್ರತಿನಿಧಿಗಳಾದ ನಿಮಗೆ ಗೊತ್ತಿಲ್ವಾ.? ಟಿಪ್ಪು ಸುಲ್ತಾನೇ  ಡ್ಯಾಮ್ ಗೆ ಅಡಿಗಲಿಟ್ಟಿರೋದು ಎಂದು ಸಚಿವ ಹೆಚ್ ಸಿ ಮಹಾದೇವಪ್ಪ ಹೇಳಿಕೆ ಸಮರ್ಥಿಸಿಕೊಂಡರು.

ಅಣೆಕಟ್ಟಿನ ಬಳಿಯೇ ಶಿಲನ್ಯಾಸ  ಇದೆ. ನಾನು ಈ ವಿಚಾರವನ್ನ 15 ವರ್ಷ ಮುಂಚೆನೇ ಹೇಳಿದ್ದೆ. ಕೆಆರ್ ಎಸ್ ಗೆ ಒಳಗೆ ಹೋಗುವಾಗ ಬಲಗಡೆ ದ್ವಾರದಲ್ಲಿ ಬರೆದಿದ್ದಾರೆ.  ಟಿಪ್ಪುನೇ ಅಡಿಗಲ್ಲಿಟ್ಟಿದ್ದು ಅಂತಾ. ಈ ವಿಚಾರದಲ್ಲಿ ಬಿಜೆಪಿಯವರು ಯಾಕೆ ವಿವಾದ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.

Key words: Vatal Nagaraj, demands ,Rs 5 crore, compensation, stampede